‘ನಿರಂತರ ಜಾಗರೂಕತೆಯಿಂದ ಯಶಸ್ಸು’

7
ನಿವೃತ್ತ ಪ್ರಾಚಾರ್ಯ ಎಚ್.ಐ.ಮಾಲಗಾರ ಅವರಿಗೆ ಬೀಳ್ಕೊಡುಗೆ

‘ನಿರಂತರ ಜಾಗರೂಕತೆಯಿಂದ ಯಶಸ್ಸು’

Published:
Updated:
Deccan Herald

ವಿಜಯಪುರ: ‘ಯಾವುದೇ ಕೆಲಸ ಆಗಿರಲಿ, ಪ್ರಾಮಾಣಿಕವಾಗಿ ನಿರಂತರ ಜಾಗರೂಕತೆಯಿಂದ, ಅಂದಿನ ಕೆಲಸ ಅಂದೇ ಮಾಡುವುದರಿಂದ ಯಶಸ್ಸು ಸಾಧ್ಯ’ ಎಂದು ನಿವೃತ್ತ ಪ್ರಾಚಾರ್ಯ ಎಚ್.ಐ.ಮಾಲಗಾರ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಪ್ರೀತಿ ಸ್ನೇಹ ಶಾಶ್ವತ’ ಎಂದರು.

ವಿಶ್ರಾಂತ ಡಿಡಿಪಿಯು ಎ.ಬಿ.ಅಂಕದ, ಲಚ್ಯಾಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಕೆ.ಎ.ಉಪ್ಪಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕಲ್ಲೂರಮಠ ಇನ್ನಿತರರು ಮಾಲಗಾರ ದಂಪತಿಗಳನ್ನು ಸನ್ಮಾನಿಸಿದರು.

ಪ್ರಾಚಾರ್ಯ ಪ್ರೊ.ಎಸ್.ಆರ್.ಹಳ್ಳಿ ಅಧ್ಯಕ್ಷತೆ ವಹಿಸಿದ್ದರು ಸಿಬ್ಬಂದಿ ಕಾರ್ಯದರ್ಶಿ ಪ್ರೊ.ಎಸ್.ಬಿ.ಸಾವಳಸಂಗ, ವಿದ್ಯಾರ್ಥಿ ಪ್ರತಿನಿಧಿ ಅಶ್ವಿನಿ ಕಟ್ಟಿಮನಿ, ಪ್ರೊ.ಬಿ.ಬಿ.ಚವ್ಹಾಣ, ಪ್ರೊ.ನಸೀಮಾ ಅಖ್ತರ, ಪ್ರೊ.ಎಂ.ಎಂ.ದಖನಿ, ಪ್ರೊ.ಎಲ್.ಬಿ.ರೆಡ್ಡಿ, ಪ್ರೊ.ಎಸ್.ವಿ.ಮಮದಾಪುರ, ಪ್ರೊ.ಎ.ಎಂ.ಕಂದಗಲ್ಲ, ಪ್ರೊ.ಮಹಾದೇವಿ ಸುಂಗಾರೆ, ಪ್ರೊ.ಎಸ್.ಸಿ.ಕರಣಿ, ಪ್ರೊ.ಎಸ್.ಎನ್.ದೀಕ್ಷಿತ, ಪ್ರೊ.ಎಸ್.ಆರ್.ಬಿರಾದಾರ, ಪ್ರೊ.ಎಸ್.ಎಸ್.ಬಣಗಾರ, ಪ್ರೊ.ಛಾಯಾದೇವಿ ದ್ಯಾಪುರ, ಪ್ರೊ.ವೀಣಾ ಮೈತ್ರಿ, ಹರೀಶ ಕ್ಷೀರಸಾಗರ, ಲಕ್ಷ್ಮಿ ಅಂಗಡಿ, ಶೈಲಾ ಅರಕೇರಿ, ಎಚ್.ಎಂ.ಉಕ್ಕಲಿ, ವಿಠ್ಠಲ ದಳವಾಯಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರೊ.ಎಸ್.ಸಿ.ತೋಳನೂರ ಸ್ವಾಗತಿಸಿದರು. ಪ್ರೊ.ಮೀನಾಕ್ಷಿ ಪಾಟೀಲ ವಂದಿಸಿದರು. ಪ್ರೊ.ಎಂ.ಬಿ.ರಜಪೂತ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !