ಬುಧವಾರ, ಜೂನ್ 29, 2022
24 °C

ಬ್ಲಾಕ್‌ಬಸ್ಟರ್ ಚಲನಚಿತ್ರ ಕೆಜಿಎಫ್‌-2 ಈಗ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ವೀಕ್ಷಿಸುವ ಸದವಕಾಶ! ಕೇವಲ ₹199

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಭಾರತದ ಮನರಂಜನೆ ಕ್ಷೇತ್ರದಲ್ಲಿ ಅತಿಹೆಚ್ಚು ಜನಪ್ರಿಯವಾದ ಮತ್ತು ಪ್ಯಾನ್‌ ಇಂಡಿಯಾ ಬ್ಲಾಕ್‌ಬಸ್ಟರ್ ಚಿತ್ರ ಕೆಜಿಎಫ್‌ ಚಾಪ್ಟರ್‌-2 ಸಿನಿಮಾ ಇದೀಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬರುತ್ತಿದೆ. ಹೌದು, ನೀವು ಕೇಳುತ್ತಿರುವ ಸುದ್ದಿ ನಿಜವಾದದ್ದೇ! ಕೆಜಿಎಫ್‌ ಅಭಿಮಾನಿಗಳಿಗೆ ಸಿನಿಮಾವನ್ನೀಗ ಡಿಜಿಟಲ್ ಚಂದಾದಾರರಾಗುವ ಮೊದಲೇ ವೀಕ್ಷಿಸುವ ಸದಾವಕಾಶ ಸಿಕ್ಕಿದೆ. ಅಂದರೆ, ಇದು ಕೇವಲ ಅಮೆಜಾನ್‌ ಪ್ರೈಮ್‌ ಸದಸ್ಯರಿಗಷ್ಟೇ ಅಲ್ಲ, ಸದಸ್ಯರಲ್ಲದವರೂ ಈ ಸಿನಿಮಾವನ್ನು ಮನೆಯಲ್ಲೇ ಕುಳಿತು ಕೇವಲ ₹199 ಪಾವತಿಸಿ ವೀಕ್ಷಿಸಬಹುದು. ಎಲ್ಲದಕ್ಕಿಂತ ಮಿಗಿಲಾದ ವಿಶಿಷ್ಟ ಅನುಭವವೆಂದರೆ ಎಚ್‌ಡಿ ಗುಣಮಟ್ಟದಲ್ಲಿ ಚಿತ್ರವನ್ನು ಕನ್ನಡ, ಹಿಂದಿ, ತಮಿಳು, ತೆಲುಗು ಅಥವಾ ಮಲಯಾಳಂನಲ್ಲಿ, ತಮ್ಮ ಇಷ್ಟದ ಭಾಷೆಯಲ್ಲಿ ನೋಡಬಹುದು.

ಬಾಡಿಗೆ ಪಾವತಿಸಿ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವು ಅಮೆಜಾನ್ ಪ್ರೈಮ್‌ ವಿಡಿಯೊದ ಮನರಂಜನಾ ಮಾರುಕಟ್ಟೆಯನ್ನು ವಿಸ್ತರಿಸುವ ಒಂದು ಭಾಗ. ಭಾರತದಾದ್ಯಂತ ಗ್ರಾಹಕರಿಗೆ ಡಿಜಿಟಲ್‌ ಮಾಧ್ಯಮದಲ್ಲಿ ಚಿತ್ರ ಬಿಡುಗಡೆಗೊಳ್ಳುವ ಮೊದಲೇ ಬಾಡಿಗೆ ಮೂಲಕ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿದೆ. ಇದಕ್ಕೆ ಸೇರ್ಪಡೆ ಎಂಬಂತೆ ಕೆಜಿಎಫ್‌ ಚಾಪ್ಟರ್‌-2 ಈಗ ಅಭಿಮಾನಿಗಳನ್ನು ರಂಜಿಸಲು ಬಂದಿದೆ. ವಿಶ್ವದಾದ್ಯಂತ ಖ್ಯಾತ ಸಿನಿಮಾಗಳನ್ನು, ಪ್ರಶಸ್ತಿ ವಿಜೇತ ಚಿತ್ರಗಳನ್ನು, ಇತ್ತೀಚೆಗೆ ಬಿಡುಗಡೆಗೊಂಡ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಿತ್ರಗಳನ್ನು ಬಾಡಿಗೆ ಸೌಲಭ್ಯದ ಮೂಲಕ ಮೊದಲೇ ನೋಡಬಹುದಾಗಿದೆ. ಪ್ರೈಮ್‌ ವಿಡಿಯೊದಲ್ಲಿರುವ ಬಾಡಿಗೆ ಮೂಲಕ ಚಿತ್ರ (ಮೂವೀ ರೆಂಟಲ್ಸ್) ವೀಕ್ಷಿಸುವವರಿಗೆ ಪ್ರೈಮ್‌ ಸದಸ್ಯರಿಗೆ ಲಭ್ಯವಿರುವ ಚಿತ್ರಗಳ ಹೊರತಾಗಿಯೂ ಹಲವು ಸಿನಿಮಾಗಳು ದೊರೆಯಲಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಅನುಕೂಲಗಳನ್ನು ಒದಗಿಸುತ್ತಿದೆ.

ಕೆಜಿಎಫ್ ಚಾಪ್ಟರ್-2 ಚಿತ್ರವು, 2018ರ ಕೆಜಿಎಫ್‌ ಚಾಪ್ಟರ್‌-1 ಸಿನಿಮಾದ ಮುಂದುವರಿಕೆ ಭಾಗವಾಗಿದೆ. ಕೋಲಾರ ಚಿನ್ನದ ಗಣಿಯ ರಕ್ತಸಿಕ್ತ ಚರಿತ್ರೆಯಲ್ಲಿ ಹೆಸರು ಮಾಡಿದ ರಾಕಿ ಕುರಿತಾದ ಚಿತ್ರ ಇದಾಗಿದೆ. ರಾಕಿ ಅಭಿಮಾನಿಗಳು ಆತನ ಮೇಲೆ ಭರವಸೆಯಿಟ್ಟಿದ್ದರೆ, ಸರ್ಕಾರವು ರಾಕಿಯ ಚಟುವಟಿಕೆಯನ್ನು ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕು ಎಂದು ಪರಿಗಣಿಸುತ್ತದೆ. ಎಲ್ಲ ವಿಧದ ಸವಾಲುಗಳ ವಿರುದ್ಧ ಹೋರಾಡುವ ರಾಕಿಯ ಕಥಾಹಂದರ ಚಿತ್ರದಲ್ಲಿದೆ. ನಾರಾಚಿ ಪ್ರದೇಶದ ಜನರನ್ನು ರಕ್ಷಿಸುವ ಹೀರೋ ಆಗಿ ರಾಕಿ ಕಂಗೊಳಿಸಿದ್ದಾನೆ. ತಾಯಿಗೆ ನೀಡಿದ ವಾಗ್ದಾನವನ್ನು ಪೂರೈಸಲು ರಾಕಿಯು ಅಧೀರ, ಇನಾಯತ್‌ ಖಲೀಲ್‌ ಮತ್ತು ರಮಿಕಾ ಸೇನ್‌ ಮುಂತಾದವರಿಂದ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಪ್ರಮುಖ ಪಾತ್ರದಲ್ಲಿರುವ ಯಶ್‌ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ಪ್ರಕಾಶ್‌ ರಾಜ್‌, ರಾವ್‌ ರಮೇಶ್, ಈಶ್ವರಿ ರಾವ್‌, ಅಚ್ಯುತ್‌ ಕುಮಾರ್‌ ಮತ್ತು ಅರ್ಚನಾ ಜೋಯಿಸ್ ಮತ್ತಿತರರು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ ಚಾಪ್ಟರ್‌ 2 ಚಿತ್ರವನ್ನು ವಿಜಯ್‌ ಕಿರಗಂದೂರ್‌ ಅವರ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿದೆ.

ಗ್ರಾಹಕರು ಕೆಜಿಎಫ್‌ 2 ಚಿತ್ರವನ್ನು ಕೇವಲ ₹199 ಬಾಡಿಗೆ ಪಾವತಿಸಿ ವೀಕ್ಷಿಸಬಹುದು. primevideo.com ನ STORE ಟ್ಯಾಬ್‌‌ನಲ್ಲಿ ಹಾಗೂ ಅಮೆಜಾನ್ ಪ್ರೈಮ್ ವಿಡಿಯೊ ಆ್ಯಪ್ ಮೂಲಕ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌, ಸ್ಮಾರ್ಟ್‌ ಟಿವಿ, ಎಸ್‌ಟಿಬಿ ಸಂಪರ್ಕಿತ ಮತ್ತು ಫೈರ್‌ ಟಿವಿ ಸ್ಟಿಕ್‌ ಮೂಲಕ ಚಿತ್ರವನ್ನು ಆನಂದಿಸಬಹುದು. ಸಿನಿಮಾವನ್ನು ಒಂದು ಬಾರಿಗೆ ಪ್ಲೇಬ್ಯಾಕ್‌ನಲ್ಲಿ ನೋಡಲು ಆರಂಭಿಸಿದ ನಂತರ ಪೂರ್ಣವಾಗಿ ವೀಕ್ಷಿಸಲು 48 ಗಂಟೆಗಳ ಸಮಯಾವಕಾಶವಿದೆ. ಚಿತ್ರವನ್ನು ಬಾಡಿಗೆಗೆ ಪಡೆದ 30 ದಿನಗಳ ಅವಧಿಯೊಳಗೆ ಚಿತ್ರವನ್ನು ವೀಕ್ಷಿಸಬೇಕಾಗುತ್ತದೆ.