ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆ ಮಾಡಿಕೊಂಡಿರುವ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಂಪೂರ್ಣ ಬದ್ಧವಾಗಿರುವುದಾಗಿ ಮಾಧ್ಯಮ ಸಂಸ್ಥೆ ಜಿಯೊಸ್ಟಾರ್ (ಜಿಯೊ ಹಾಟ್ಸ್ಟಾರ್) ಶುಕ್ರವಾರ ತಿಳಿಸಿದೆ. ಐಸಿಸಿ ಜತೆಗಿನ ಒಪ್ಪಂದದಿಂದ ಜಿಯೊಸ್ಟಾರ್ ಹಿಂದೆಸರಿದಿದೆ ಎಂಬ ವರದಿಗಳು ಸತ್ಯದಿಂದ ಕೂಡಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಒಪ್ಪಂದದ ನಿಯಮಗಳನ್ನು ಪಾಲಿಸಲು ಬದ್ಧವಿರುವುದಾಗಿ ಜಿಯೊಸ್ಟಾರ್ ತಿಳಿಸಿದೆ ಎಂಬುದಾಗಿ ಪ್ರತ್ಯೇಕ ಪ್ರಕಟಣೆಯಲ್ಲಿ ಐಸಿಸಿ ಖಚಿತಪಡಿಸಿದೆ.

ನಷ್ಟದ ಕಾರಣದಿಂದಾಗಿ, ಐಸಿಸಿ ಜೊತೆಗಿನ ನೇರ ಪ್ರಸಾರ ಹಕ್ಕುಗಳ ಒಪ್ಪಂದದಿಂದ ಅವಧಿಗೂ ಮುನ್ನವೇ ಹೊರಬರಲು ಜಿಯೊಸ್ಟಾರ್ ನಿರ್ಧರಿಸಿದೆ. ಈ ಕಾರಣ, ಪುರುಷರ ಟಿ20 ವಿಶ್ವಕಪ್ಗೂ ಮೊದಲು ಇತರ ಪ್ರಸಾರಕರಿಗಾಗಿ ಐಸಿಸಿ ಹುಟುಕಾಟ ನಡೆಸುತ್ತಿದೆ ಎಂಬ ವರದಿಗಳು ಹರಿದಾಡಿದ್ದವು. ಹೀಗಾಗಿ ಒಪ್ಪಂದದ ಬಗ್ಗೆ ಜಿಯೊಸ್ಟಾರ್ ಸ್ಪಷ್ಟನೆಯನ್ನು ನೀಡಿದೆ.

2024–27ನೇ ಸಾಲಿನ ಐಸಿಸಿ ಟೂರ್ನಿಗಳ ಭಾರತದಲ್ಲಿನ ಪ್ರಸಾರದ ಹಕ್ಕನ್ನು 3 ಶತಕೋಟಿ ಡಾಲರ್ (ಅಂದಾಜು 27 ಸಾವಿರ ಕೋಟಿ) ಕೊಟ್ಟು ಜಿಯೊಸ್ಟಾರ್ ಖರೀದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.