ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಪ್ಲಾಸ್ಟಿಕ್‌ ಸಂಸ್ಕರಣೆ–ಮರುಬಳಕೆಯ ಪ್ರಯೋಜನಗಳು

Last Updated 14 ಫೆಬ್ರುವರಿ 2020, 8:23 IST
ಅಕ್ಷರ ಗಾತ್ರ

ಭಾರತೀಯ ವಾಣಿಜ್ಯ ಮತ್ತು ಉದ್ಯಮ ಮಂಡಳಿ ನಡೆಸಿದ ಅಧ್ಯಯನವೊಂದರ ಪ್ರಕಾರ 2020ರ ಹೊತ್ತಿಗೆ ಪ್ಲಾಸ್ಟಿಕ್‌ ಸಂಸ್ಕರಣಾ ಉದ್ಯಮವು 22 ಮಿಲಿಯನ್‌ ಟನ್‌ಗಳಷ್ಟು ಪ್ಲಾಸ್ಟಿಕ್‌ ಅನ್ನು ಸಂಸ್ಕರಣೆ ಮಾಡಲಿದೆ. ಈ ಸಂಖ್ಯೆ ಆತಂಕ ಉಂಟು ಮಾಡದೇ ಇರಬಹುದು. ಆದರೆ, ಅಷ್ಟು ಪ್ರಮಾಣದ ಪ್ಲಾಸ್ಟಿಕ್‌ ಅಂತೂ ಮರುಬಳಿಕೆಯಾಗುತ್ತಿದೆ.  

ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ 90% ವಸ್ತುಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಪ್ಲಾಸ್ಟಿಕ್‌ನ ಬಳಕೆ ಇದ್ದೇ ಇರುತ್ತದೆ. ಆದರೆ, ಅವುಗಳ ಮರಬಳಕೆ ಆಗದೇ ಪರಿಸರದ ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತಿವೆ.  ಪ್ಲಾಸ್ಟಿಕ್‌ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಅಥವಾ ಅವುಗಳನ್ನು ಮರುಬಳಕೆ ಮಾಡುವುದು ನಮ್ಮ ಮುಂದಿನ ನಡೆಯಗಬೇಕಾದ್ದು ಅಗತ್ಯ. ಪ್ಲಾಸ್ಟಿಕ್‌ನ ಮರುಬಳಕೆಯಿಂದ ಹೊಸ ಪ್ಲಾಸ್ಟಿಕ್‌ನ ಉತ್ಪತ್ತಿಯನ್ನು ನಾವು ತಡೆಯಬಹುದು. ಆ ಮೂಲಕ ಅದರಿಂದಾಗುವ ಪರಿಸರದ ಹಾನಿಯನ್ನೂ ನಾವು ತಡೆಯಬಹುದು. ನಾವು ಇಲ್ಲಿ ಒಂದು ನಾಣ್ಣುಡಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ‘ಒಬ್ಬ ವ್ಯಕ್ತಿಗೆ ಅನಗತ್ಯ ಎನಿಸಿದ್ದು ಮತ್ತೊಬ್ಬ ವ್ಯಕ್ತಿಗೆ ಉಡುಗೊರೆ’ಯಾಗಬಹುದು. ಪ್ಲಾಸ್ಟಿಕ್‌ ಕೂಡ ಹಾಗೆಯೇ. ಅದರ ಮರುಬಳಕೆಯಿಂದ ಪ್ಲಾಸ್ಟಿಕ್‌ ತ್ಯಾಜ್ಯ ಭೂಮಿಗೆ ಬೀಳುವುದನ್ನೂ ನಾವು ತಡೆಯಬಹುದು. ಮರಗಳನ್ನು ಕಡೆದು ಪೀಠೋಪಕರಣ ಮಾಡುವ ಬದಲಿಗೆ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡಿ ಪೀಠೋಪಕರಣಗಳನ್ನು ತಯಾರಿಸಬಹುದು. ಪ್ಲಾಸ್ಟಿಕ್‌ ಪೀಠೋಪಕರಣ ದೀರ್ಘ ಕಾಲ ಬಾಳಿಕೆಯೂ ಬರುವಂಥವು. ರಸ್ತೆಗಳ ಡಾಂಬರಿಗೆ ಪ್ಲಾಸ್ಟಿಕ್‌ ಬಳಸಬಹುದು. 

ಹೊಸ ಪ್ಲಾಸ್ಟಿಕ್‌ನಿಂದ ವಸ್ತುಗಳನ್ನು ತಯಾರಿಸಲು ಮರಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುವ ಪ್ಲಾಸ್ಟಿಕ್‌ಗಿಂತಲೂ ಹೆಚ್ಚಿನ ಇಂಧನ, ಶ್ರಮ ಬೇಕಾಗುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಪ್ಲಾಸ್ಟಿಕ್‌ ಮರುಬಳಕೆಯೇ ಲಾಭದಾಯ ಮತ್ತು ಸರಿಯಾದ ಕ್ರಮ. ಹೊಸ ಪ್ಲಾಸ್ಟಿಕ್‌ ಉತ್ಪಾದನೆ ಕಡಿಮೆಯಾದರೆ ತ್ಯಾಜ್ಯ ಉತ್ಪಾದನೆಯು ಕಡಿಮೆಯಾಗುತ್ತದೆ. ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್‌ ಪ್ರಮಾಣವೂ ಕಡಿಮೆಯಾಗಿ ಜಲಚರಗಳ ಜೀವ ಉಳಿದಂತೆ ಆಗುತ್ತದೆ. 

ಭೂಮಿಯಲ್ಲಿ 7 ಬಗೆಯ ಪ್ಲಾಸ್ಟಿಕ್‌ಗಳು ಅಸ್ತಿತ್ವದಲ್ಲಿವೆ.  ಪಿಇಟಿ (ಪಾಲಿಥಿಲೀನ್ ಟೆರೆಫ್ಥಲೇಟ್), ಎಚ್‌ಡಿಪಿಇ (ಹೈ-ಡೆನ್ಸಿಟಿ ಪಾಲಿಥೀನ್), ಪಿವಿಸಿ (ಪಾಲಿವಿನೈಲ್ ಕ್ಲೋರೈಡ್), ಎಲ್‌ಡಿಪಿಇ (ಲೋ-ಡೆನ್ಸಿಟಿ ಪಾಲಿಥಿಲೀನ್), ಪಿಪಿ (ಪಾಲಿಪ್ರೊಪಿಲೀನ್), ಪಿಎಸ್ (ಪಾಲಿಸ್ಟೈರೀನ್), ಇತರೆ (ಬಿಪಿಎ, ಪಾಲಿಕಾರ್ಬೊನೇಟ್ ಮತ್ತು ಲೆಕ್ಸಾನ್)... ಈ ಬಗೆಯ ಪ್ಲಾಸ್ಟಿಕ್‌ಗಳು ಇಲ್ಲಿವೆ.  ಈ ಪ್ಲಾಸ್ಟಿಕ್‌ಗಳನ್ನು ನಾವು ಮರುಬಳಕೆ ಮಾಡಲು ಸಾಧ್ಯವಿದೆ. ಅವುಗಳನ್ನು ಸಂಸ್ಕರಿಸಲು ಅವಕಾಶಗಳಿವೆ. 

ಪಿಇಟಿ ಬಾಟೆಲ್‌ಗಳನ್ನು ಸಂಸ್ಕರಿಸಿ ಅಥ್ಲಿಟ್‌ಗಳ ಶೂಗಳನ್ನು ಮಾಡಬಹುದು. ಎಚ್‌ಡಿಪಿಇ ಶಾಂಪು ಬಾಟೆಲ್‌ಗಳನ್ನು ನೀರಿನ ಟ್ಯಾಂಕ್‌ಗಳನ್ನು, ಪಿವಿಸಿ ಪೈಪ್‌ಗಳನ್ನು ತಯಾರಿಸಲು ಬಳಸಬಹುದು. ದಿನಸಿ ಪದಾರ್ಥಗಳನ್ನು ತುಂಬಲು ಬಳಸುವ ಪ್ಲಾಸ್ಟಿಕ್‌ ಚೀಲಗಳನ್ನು ಪೀಠೋಪಕರಣ ತಯಾರಿಕೆಗೆ ಬಳಸಬಹುದು. ಪಿಪಿ ಬಾಟೆಲ್‌ಗಳಿಂದ ಬ್ಯಾಟರಿ ಕೇಬಲ್‌ಗಳನ್ನು ಉತ್ಪಾದಿಸಬಹುದು. ಪಿಎಸ್‌ ಕಪ್‌ಗಳಿಂದ ಲೈಸೆನ್ಸ್‌ ಪ್ಲೇಟ್‌ಗಳನ್ನು ಮಾಡಬಹುದು. ಕನ್ನಡಕಗಳ ತಯಾರಿಕೆಯಲ್ಲಿ ಬಳಸಲಾಗುವ 7ನೇ ದರ್ಜೆಯ ಪ್ಲಾಸ್ಟಿಕ್‌ನಿಂದ ಪ್ಲಾಸ್ಟಿಕ್‌ ಗಟ್ಟಿಗಳನ್ನು ಮಾಡಬಹುದು. ಈ ಮೂಲಕ ನಾವು ಹೊಸ ಪ್ಲಾಸ್ಟಿಕ್‌ ಉತ್ಪಾದನೆಯನ್ನು ಶಾಶ್ವತವಾಗಿ ನಿಲ್ಲಿಸಲು ಅವಕಾಶವಿದೆ.  

ಜಗತ್ತು ಬೆಳೆದಂತೆ ಪ್ಲಾಸ್ಟಿಕ್‌ನ ಬೇಡಿಕೆಯೂ ಹೆಚ್ಚುತ್ತಿದೆ. ಭಾರತದಲ್ಲಿ ಪ್ಲಾಸ್ಟಿಕ್‌ನ ಮರು ಬಳಕೆಯ ಸಂಸ್ಕೃತಿ ಹಲವು ದಶಕಗಳಿಂದಲೂ ಬೆಳೆದು ಬಂದಿದೆ.  ಚಿಂದಿ ಆಯುವವರು ಮತ್ತು ಪ್ಲಾಸ್ಟಿಕ್‌ ಹೆಕ್ಕುವವರು ಈ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಪ್ಲಾಸ್ಟಿಕ್‌ ಬಳಕೆದಾರರು ಮತ್ತು ಪ್ಲಾಸ್ಟಿಕ್‌ ಪರಿಷ್ಕರಣೆ/ಮರುಬಳಕೆ ಘಟಕಗಳ ನಡುವೆ ಅವರು ಸಂಪರ್ಕ ಸೇತುವಾಗಿ ನಿಂತಿದ್ದಾರೆ. ಪ್ರತಿ ವರ್ಷ ಅವರು 50 ಸಾವಿರ ಟನ್‌ಗಳಷ್ಟು ಪ್ಲಾಸ್ಟಿಕ್‌ ಅನ್ನು ಹೆಕ್ಕುತ್ತಾರೆ ಎಂದರೆ ಯಾರಾದರೂ ನಂಬಲೇ ಬೇಕು. ನಮ್ಮೆಲ್ಲ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸುವ ಅವರು ಅತ್ಯಂತ ಕಡಿಮೆ ಹಣಕ್ಕೆ ಅವುಗಳನ್ನು ಸ್ಥಳೀಯ ಸಂಸ್ಕರಣಾ ಘಟಕಗಳಿಗೆ ನೀಡುತ್ತಾರೆ. ಪ್ಲಾಸ್ಟಿಕ್‌ ತ್ಯಾಜ್ಯದ ಮರು ಸಂಸ್ಕರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅವರು, ಕಸ ಹೆಕ್ಕಿ, ಪ್ಲಾಸ್ಟಿಕ್‌ ಅನ್ನು ವಿಂಗಡಿಸಿ ಮಾರಾಟ ಮಾಡುತ್ತಾರೆ. ಇದೇ ವೇಳೆ, ಮರು ಬಳಕೆಯಾಗದ ಪ್ಲಾಸ್ಟಿಕ್‌ ನಿಷೇಧಿಸುವ ಮೂಲಕ ಭಾರತ  ಪರಿಸರ ಸಂರಕ್ಷಣೆಯತ್ತ ಪ್ರಧಾನ ನಿರ್ಧಾರವನ್ನೂ ಕೈಗೊಂಡಿರುವುದು ಖುಷಿಯ ಸಂಗತಿ. 

ಪ್ಲಾಸ್ಟಿಕ್‌ ಮರು ಬಳಕೆ ಕುರಿತು ಜಾಗೃತಿ ಮೂಡಿಸಲು ಭಾರತದಲ್ಲಿ ಹಲವು ಸಂಘ–ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. Bottles for Change ಕೂಡ ಅದರಲ್ಲಿ ಒಂದು. ಬಳಕೆಯಾದ ಪ್ಲಾಸ್ಟಿಕ್‌ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಈ ಸಂಸ್ಥೆ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಮರುಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್‌ ಅನ್ನು ಸಂಗ್ರಹಿಸುವ, ಅವುಗಳನ್ನು ವಿಂಗಡಿಸುವ ಮತ್ತು ಮರಬಳಕೆಯ ಕೇಂದ್ರಗಳಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಈ ಸಂಸ್ಥೆ ಸೃಷ್ಟಿ ಮಾಡುತ್ತಿವೆ. ಇನ್ನೊಂದು ಪ್ರಮುಖ ವಿಚಾರವೆಂದರೆ ಪ್ಲಾಸ್ಟಿಕ್‌ ಸಂಗ್ರಹಿಸುವ ಏಜೆಂಟರು ಅತ್ಯಂತ ಸುರಕ್ಷಿತವಾಗಿ ಹೇಗೆ ಕೆಲಸ ಮಾಡಬೇಕು ಎಂಬುದರತ್ತಲೂ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. 

ಪ್ಲಾಸ್ಟಿಕ್‌ನ ಸೂಕ್ತ ವಿಲೇವಾರಿಯೂ ಇಂದಿನ ಬಹುದೊಡ್ಡ ಸವಾಲು. ಪ್ಲಾಸ್ಟಿಕ್‌ನಿಂದ ಆಗಬೇಕಾದ ಹಾನಿ ಈಗಾಗಲೇ ಆಗಿಹೋಗಿದೆ.  ಆದರೆ, ಸೂಕ್ತ ಪರಿಹಾರ ಕ್ರಮಗಳ ಮೂಲಕ ಅದರ ಪರಿಣಾಮವನ್ನು ಈಗಲೂ ಕಡಿಮೆ ಮಾಡಲು ಸಾಧ್ಯವಿದೆ. ಆ ಪರಿಹಾರ ಕ್ರಮಗಳು ನಮ್ಮ ಮನೆಗಳಿಂದಲೇ ಆರಂಭವಾಗುವಂಥವು. ತ್ಯಾಜ್ಯವನ್ನು ಮತ್ತು ಮರುಬಳಕೆಯಾಗಬಲ್ಲ ಪ್ಲಾಸ್ಟಿಕ್‌ ಅನ್ನು ವಿಂಗಡಿಸುವುದು ಮತ್ತು ಮರುಬಳಕೆಯಾಗಬಲ್ಲ ಪ್ಲಾಸ್ಟಿಕ್‌ ಅನ್ನು ಮರಳಿ ಬಳಕೆಗೆ ತರುವುದು ಮೊದಲ ಹಂತ ಮತ್ತು ಅದರಿಂದ ನಮ್ಮ ಮನೆಯೂ ಸುರಕ್ಷಿತವಾಗಿರುತ್ತದೆ. ನಮ್ಮ ಭಾಗವಹಿಸುವಿಕೆಯೂ ಇರಬಹುದಾದ ಪ್ಲಾಸ್ಟಿಕ್‌ ಮರಬಳಕೆಯ ಪ್ರಕ್ರಿಯೆಗಳ ಕುರಿತು ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅದರತ್ತ ಕಾರ್ಯಪ್ರವೃತ್ತವಾಗಬೇಕಿದೆ. 

‘ಏನೂ ಮಾಡಿಲ್ಲ ಎಂಬುದಕ್ಕಿಂತಲೂ ಏನಾದರೂ ಮಾಡುತ್ತಿದ್ದೇವೆ,’ ಎಂಬುದು ಹೆಚ್ಚು ಉಪಕಾರಿ. ಹೀಗಾಗಿ ಪ್ಲಾಸ್ಟಿಕ್‌ ಮರುಬಳಕೆಯತ್ತ ನಾವು ಏನಾದರೂ ಮಾಡಲೇಬೇಕಿದೆ. ಉತ್ತಮ ನಾಳೆಗಳಿಗಾಗಿ ಪ್ಲಾಸ್ಟಿಕ್‌ ಮರುಬಳಕೆ ಆಗಲೇಬೇಕಿದೆ. 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT