ಲಂಡನ್: ಅಮೆರಿಕದಲ್ಲಿನ ಬ್ರಿಟನ್ ರಾಯಭಾರಿ ಕಿಮ್ ಡರೊಚ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಡರೊಚ್ ಅವರು ಬ್ರಿಟನ್ ಅಧಿಕಾರಿಗಳಿಗೆ ಕಳುಹಿಸಿದ್ದ ಇ–ಮೇಲ್ ಸಂದೇಶಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಟೀಕಿಸಿದ್ದರು. ಟ್ರಂಪ್ ಆಡಳಿತ ವೈಖರಿ ಅಸಮರ್ಥ, ಅಸಮಂಜಸ ಹಾಗೂ ಅಭದ್ರವಾದದ್ದು ಎಂದು ಡರೊಚ್ ಹೇಳಿದ್ದರು.

ಈ ಇ–ಮೇಲ್ಗಳು ಇತ್ತೀಚೆಗೆ ಬಹಿರಂಗವಾದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವವಾಗಿದೆ.

ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಡರೊಚ್, ‘ರಾಯಭಾರ ಕಚೇರಿಯ ಅಧಿಕೃತ ದಾಖಲೆಗಳು ಬಹಿರಂಗಗೊಂಡಿರುವುದರಿಂದ, ನನ್ನ ಹುದ್ದೆ ಮತ್ತು ಅಧಿಕಾರಾವಧಿಯ ಕುರಿತು ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಪ್ರಸ್ತುತ ಇರುವ ಸ್ಥಿತಿಯಿಂದಾಗಿನನ್ನದೇ ರೀತಿಯಲ್ಲಿ ನನ್ನ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವದಂತಿಗಳನ್ನು ಕೊನೆಗಾಣಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.