ಶನಿವಾರ, ಫೆಬ್ರವರಿ 22, 2020
19 °C

ಬಜೆಟ್‌ ಇತಿಹಾಸ: ದೀರ್ಘಾವಧಿ ಬಜೆಟ್‌ ಭಾಷಣ ಮಾಡಿದವರು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಬೆಂಗಳೂರು: ಶನಿವಾರ 2020–21ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದ ಬಜೆಟ್‌ ಇತಿಹಾಸದಲ್ಲೇ ದೀರ್ಘಾವಧಿಯ ಭಾಷಣ ಮಾಡಿದರು. ಸುಮಾರು ಎರಡು ಗಂಟೆ 40 ನಿಮಿಷಗಳ (ಒಟ್ಟು 160 ನಿಮಿಷ) ವರೆಗೂ ಭಾಷಣ ಮಾಡಿದರು. 

2019–2020ನೇ ಸಾಲಿನ ಬಜೆಟ್‌ ಮಂಡನೆಯಲ್ಲಿ ನಿರ್ಮಲಾ ಅವರು, ಎರಡು ಗಂಟೆ 17 ನಿಮಿಷ ಬಜೆಟ್‌ ಭಾಷಣ ಮಾಡಿದ್ದರು. ಅದು ಕೇಂದ್ರ ಬಜೆಟ್‌ ಮಂಡನೆ ವೇಳೆ ಮಾಡಲಾದ ದೀರ್ಘಾವಧಿಯ ಭಾಷಣವಾಗಿ ದಾಖಲಾಗಿತ್ತು. ಇವತ್ತಿನ ಭಾಷಣ ಹೊಸ ದಾಖಲೆಯಾಗಿ ಸೇರ್ಪಡೆಯಾಗಿದೆ.

2003ರಲ್ಲಿ ಆಗಿನ ಹಣಕಾಸು ಸಚಿವ ಜಸ್ವಂತ್‌ ಸಿಂಗ್‌ ಅವರು ಮಾಡಿದ್ದ ಬಜೆಟ್‌ ಭಾಷಣಕ್ಕಿಂತ ನಾಲ್ಕು ನಿಮಿಷ ಹೆಚ್ಚು ನಿರ್ಮಲಾ ಸೀತಾರಾಮನ್‌ ತೆಗೆದುಕೊಂಡಿದ್ದರು. 

ಮನಮೋಹನ್‌ ಸಿಂಗ್‌

ಬಜೆಟ್‌ ಮಂಡನೆ ವೇಳೆ ಅತಿ ಹೆಚ್ಚು ಪದಗಳನ್ನು ಬಳಸಿರುವುದು ಮಾಜಿ ಪ್ರಧಾನಿ ಮತ್ತು ಹಣಕಾಸು ಸಚಿವ ಮನಮೋಹನ್‌ ಸಿಂಗ್‌. ಅವರು 1991ರ ಬಜೆಟ್‌ ಮಂಡನೆಯಲ್ಲಿ 18,650 ಪದಗಳನ್ನು ಬಳಸಿದ್ದರು. 2018ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ 18,604 ಪದಗಳನ್ನು ಬಳಸುವ ಮೂಲಕ ಬಜೆಟ್‌ ಭಾಷಣದಲ್ಲಿ ಅತಿ ಹೆಚ್ಚು ಪದಗಳನ್ನು ಬಳಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 

ಅರುಣ್‌ ಜೇಟ್ಲಿ

ಅರುಣ್‌ ಜೇಟ್ಲಿ ಅವರು 2014, 2017 ಹಾಗೂ 2016ರಲ್ಲಿ ಮಾಡಿದ ಬಜೆಟ್‌ ಭಾಷಣದ ಅವಧಿಯು ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ. 

ಇನ್ನು ಬಜೆಟ್‌ ಇತಿಹಾಸದಲ್ಲಿ ಅತಿ ಕಡಿಮೆ ಪದಗಳನ್ನು ಒಳಗೊಂಡಿದ್ದ ಬಜೆಟ್‌ ಭಾಷಣ ಎಚ್‌.ಎಂ.ಪಟೇಲ್‌ ಅವರ ಹೆಸರಿನಲ್ಲಿದೆ. ಅವರು 1977ರ ಮಧ್ಯಂತರ ಬಜೆಟ್‌ ಮಂಡನೆಯಲ್ಲಿ ಮಾಡಿದ್ದ ಭಾಷಣ 800 ಪದಗಳನ್ನು ಒಳಗೊಂಡಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು