ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ 2020 | ಸುಳ್ಳಾಯ್ತು ನಿರೀಕ್ಷೆ: ಈ ಬಾರಿ ಸಿಗಲಿಲ್ಲ ಉದ್ಯೋಗಖಾತ್ರಿಗೆ ಒತ್ತು

Last Updated 1 ಫೆಬ್ರುವರಿ 2020, 13:34 IST
ಅಕ್ಷರ ಗಾತ್ರ

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಕೇಂದ್ರ ಸರ್ಕಾರ ₹ 61,600 ಕೋಟಿ ಅನುದಾನವನ್ನು ಘೋಷಿಸಿದೆ. ಸ್ಥಗಿತಗೊಂಡಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಗ್ರಾಮೀಣ ವೆಚ್ಚ ಹೆಚ್ಚಾಗಬೇಕು. ಇದನ್ನು ಸಾಧ್ಯವಾಗಿಸಲು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿಗಾಗಿಹೆಚ್ಚಿನ ಹಣ ಘೋಷಿಸಬಹುದು ಎಂಬ ನಿರೀಕ್ಷೆಸುಳ್ಳಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ₹ 71,002 ಕೋಟಿ ನಿಧಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿರಾಜ್ಯಗಳಿಗೆ ವರ್ಗಾಯಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಘೋಷಿತ ಮೊತ್ತವು ₹ 9000 ಕೋಟಿಯಷ್ಟು ಕಡಿಮೆಯಾಗಿದೆ.

ದೇಶದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವುದರ ಜೊತೆಜೊತೆಗೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿತ್ತು.ಈ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆ ಪುನಶ್ಚೇತನ ಡಬೇಕು ಎಂದು ಹಲವರು ಸಲಹೆ ನೀಡಿದ್ದರು. ಉದ್ಯೋಗ ಖಾತ್ರಿಯಡಿ ನೋಂದಾಯಿಸಿಕೊಂಡಿರುವ12.5 ಕೋಟಿ ಮಂದಿ ಪ್ರಸ್ತುತ ದೇಶದ ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ.

ಉದ್ಯೋಗ ಖಾತ್ರಿಗೆ ಹಣ ನೀಡಲು ಹಿಂಜರಿದಿದ್ದರೂ ಸರ್ಕಾರ ಗ್ರಾಮೀಣ ರಸ್ತೆ ನಿರ್ಮಾಣದ ನಿಧಿಯನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ₹ 19,500 ಕೋಟಿ ಅನುದಾನ ಘೋಷಿಸಲಾಗಿದೆ. ಈ ಯೋಜನೆಗೆ ಕಳೆದ ಆರ್ಥಿಕ ವರ್ಷದಲ್ಲಿ ₹ 14,070 ಕೋಟಿ ವ್ಯಯಿಸಲಾಗಿತ್ತು.

ಗ್ರಾಮೀಣ ಗೃಹ ನಿರ್ಮಾಣ ಯೋಜನೆಗೂ ಅನುದಾನದ ಮೊತ್ತವನ್ನು ತುಸು ಹೆಚ್ಚಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ₹ 18,475 ಕೋಟಿ ಮಂಜೂರು ಮಾಡಲಾಗಿತ್ತು. ಈ ಬಾರಿ ಈ ಮೊತ್ತವು ₹ 19,500 ಕೋಟಿಗೆ ಏರಿಕೆಯಾಗಿದೆ. ಮುಂದಿನ 5 ವರ್ಷಗಳಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ದೀನ್ ದಯಾಳ್ಅಂತ್ಯೋದಯ ಯೋಜನೆಯ ಅನುದಾನವು ತುಸು ಏರಿಕೆ ಕಂಡಿದೆ. ಈ ಬಾರಿ ₹ 9,210 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬಾರಿ ₹ 9,024 ಕೋಟಿ ಅನುದಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT