ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget: ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿವೆ ಮುಖ್ಯಾಂಶಗಳು

Last Updated 4 ಮಾರ್ಚ್ 2022, 13:58 IST
ಅಕ್ಷರ ಗಾತ್ರ

2022–23ನೇ ಸಾಲಿನ ಹಾಗೂ ತಮ್ಮ ಚೊಚ್ಚಲ ಬಜೆಟ್‌ ಅನ್ನುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದರು. ಪ್ರಗತಿಯ ಮುನ್ನೋಟವೆಂದೇ ಬಿಂಬಿಸಲಾಗಿದ್ದ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ;

* 2024ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗೆ ರಾಜ್ಯದಿಂದ ಕನಿಷ್ಠ 75 ಕ್ರೀಡಾಪಟುಗಳನ್ನು ಸಿದ್ಧಪಡಿಸಲು ‘ಅಮೃತ ಕ್ರೀಡಾ ದತ್ತು ಯೋಜನೆ’ಯಡಿ ತಲಾ ₹10 ಲಕ್ಷದವರೆಗೆ ಪ್ರತಿ ವರ್ಷ ಶ್ರೇಷ್ಠ ಮಟ್ಟದ ತರಬೇತಿ ಪಡೆಯಲು ವಿನಿಯೋಗಿಸುವುದಾಗಿ ಘೋಷಣೆ

*ರಾಯಚೂರಿನಲ್ಲಿ ₹186 ಕೋಟಿ ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ

*ವೀರಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ತಲಾ ₹100 ಕೋಟಿ ಯೋಜನೆ

*ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ನಾರಾಯಣ ಗುರು ವಸತಿ ಶಾಲೆ ಪ್ರಾರಂಭಕ್ಕೆ ನಿರ್ಧಾರ

*ಪ್ರವಾಸೋದ್ಯಮಕ್ಕೆ ಆದ್ಯತೆ:ಜೋಗ, ನಂದಿ ಬೆಟ್ಟ, ಯಾಣದಲ್ಲಿ ರೋಪ್‌ವೇಗೆ ಅನುದಾನ

*2022–23ನೇ ಸಾಲಿನಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ.7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪಿಸುವುದಾಗಿ ಘೋಷಣೆ

* ಕೆಪಿಎಸ್‌ಸಿ, ಯುಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್‌, ರೈಲ್ವೆ, ಸಿಡಿಎಸ್, ನೀಟ್, ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದ ವತಿಯಿಂದ ಆನ್‌ಲೈನ್‌ ಕೋಚಿಂಗ್‌

*2022-23ರ ಸಾಲಿನಲ್ಲಿಯಾವುದೇ ತೆರಿಗೆ ಹೆಚ್ಚಳ ಇಲ್ಲ; ಬೆಲೆ ಏರಿಕೆಯೂ ಇಲ್ಲ

* ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಿಗ್ನಲ್‌ ಮುಕ್ತ ವಾಹನ ಸಂಚಾರಕ್ಕೆ ಬಿಬಿಎಂಪಿ, ಬಿಡಿಎ ಮತ್ತು ಎನ್‌ಎಚ್ಎಐ ವತಿಯಿಂದ ಗ್ರೇಡ್‌ ಸೆಪರೇಟರ್‌ ಮತ್ತು ಮೇಲು ಸೇತುವೆ ಕಾಮಗಾರಿ.

ಬಜೆಟ್‌ನ ಲೈವ್ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:

*ಅಮೃತ್‌ ನಗರೋತ್ಥಾನ ಯೋಜನೆ: ಬೆಂಗಳೂರು ನಗರದ ಮೂಲಭೂತ ಸೌಕರ್ಯಕ್ಕಾಗಿ 3 ವರ್ಷಗಳಲ್ಲಿ ₹6,000 ಕೋಟಿ

*₹11,250 ಕೋಟಿ ವೆಚ್ಚದ ನಮ್ಮ ಮೆಟ್ರೊ ಹಂತ–3 ಯೋಜನೆ ಜಾರಿಗೆ ಕೇಂದ್ರಕ್ಕೆ ಡಿ.ಪಿ.ಆರ್‌ ಸಲ್ಲಿಕೆ

*ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಪಂಚ ಸೂತ್ರಗಳಘೋಷಣೆ.

*ಮೇಕದಾಟು ಯೋಜನೆಗೆ ₹1,000 ಕೋಟಿ ಅನುದಾನ

*ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹20 ಕೋಟಿ ಅನುದಾನ

*ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಘೋಷಣೆ

*ರಾಜ್ಯದಿಂದ ಕಾಶಿ ಯಾತ್ರೆಯನ್ನು ಕೈಗೊಳ್ಳುವ ಸುಮಾರು 30,000 ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ ₹5,000 ಸಹಾಯಧನ ಘೋಷಣೆ

*ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್‌ಮರವತ್ತೂರು ಇನ್ನಿತರ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ ಪ್ರಾರಂಭಿಸುವ ಘೋಷಣೆ

*ರಾಜ್ಯ ಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ನಡೆಸಲು ಅಸ್ತು

*ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ₹56,710 ಕೋಟಿ ಅನುದಾನ

* ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳಲ್ಲಿ438 ‘ನಮ್ಮ ಕ್ಲಿನಿಕ್‘ಗಳನ್ನು ಸ್ಥಾಪನೆ

*ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಲಹೆ ನೀಡಲು 300 ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆ

*ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ: ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ

* ‘ರೈತ ಶಕ್ತಿ’ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ ₹250ರಂತೆ ಡೀಸೆಲ್ ಸಹಾಯಧನ: ₹600 ಕೋಟಿ ಅನುದಾನ.

* ಮಕ್ಕಳ ಅಭ್ಯುದಯಕ್ಕೆ ₹40,944 ಕೋಟಿ ಘೋಷಣೆ

* ಮಹಿಳೆಯರ ಅಭಿವೃದ್ಧಿಗೆ ₹43,188 ಕೋಟಿ ಘೋಷಣೆ

* ರಾಜ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಹೆಚ್ಚಳ: ಬೊಮ್ಮಾಯಿ

* ಕೃಷಿ ಕ್ಷೇತ್ರಕ್ಕೆ ₹33,700 ಕೋಟಿ ಘೋಷಣೆ

*ಬೆಂಗಳೂರು ಅಭಿವೃದ್ಧಿಗೆ ₹8,409 ಕೋಟಿ ಕೊಡುಗೆ

*2022–23ನೇ ಸಾಲಿನ ಬಜೆಟ್ ಗಾತ್ರ ₹2,65,720 ಕೋಟಿ

* ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕೆ ಆದ್ಯತೆ ನಿಡಿರುವ ಬಜೆಟ್ ಇದು: ಬೊಮ್ಮಾಯಿ

*ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 'ಪುಣ್ಯಕೋಟಿ ದತ್ತು ಯೋಜನೆ' ಆರಂಭಿಸಲಾಗುವುದು –ಬಸವರಾಜಬೊಮ್ಮಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT