ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018-19ರ ಜಿಡಿಪಿ ಪರಿಷ್ಕರಿಸಿದ ಸರ್ಕಾರ: ಶೇ 6.8ರಿಂದ ಶೇ 6.1ಕ್ಕೆ ಇಳಿಕೆ

Last Updated 31 ಜನವರಿ 2020, 13:29 IST
ಅಕ್ಷರ ಗಾತ್ರ

ಬೆಂಗಳೂರು:ಸರ್ಕಾರ 2018–19ನೇ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಶೇ 6.8ರಿಂದ ಶೇ 6.1ಕ್ಕೆ ಪರಿಷ್ಕರಿಸಿದೆ.

ಕಳೆದ ಐದು ತ್ರೈಮಾಸಿಕಗಳಲ್ಲಿ ಜಿಡಿಪಿ ಇಳಿ ಮುಖವಾಗಿದ್ದು, ಜುಲೈ–ಸೆಪ್ಟೆಂಬರ್‌ನಲ್ಲಿ ಜಿಡಿಪಿ ವೃದ್ಧಿ ದರ ಶೇ 4.5ಕ್ಕೆ ಕುಸಿದಿದೆ. ದೇಶದ ಆರ್ಥಿಕತೆ ಆರು ವರ್ಷಗಳಲ್ಲಿ ಅತಿ ನಿಧಾನ ಗತಿಯ ಬೆಳವಣಿಗೆ ಕಂಡಿದೆ.

ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಮಂಡನೆಗೂ ಮುನ್ನಾದಿನ ಪರಿಷ್ಕೃತಗೊಳಿಸಿದ 2018–19ರ ಆರ್ಥಿಕ ವೃದ್ಧಿ ದರವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಶುಕ್ರವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ 2020–21ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6–6.5ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನ ವೃದ್ಧಿ ದರ ಅಂದಾಜು ಶೇ 7ರಿಂದ ಶೇ 5ಕ್ಕೆ ಪರಿಷ್ಕರಿಸಿದೆ.

2018–19 ಮತ್ತು 2017–18ನೇ ಹಣಕಾಸು ವರ್ಷಗಳಲ್ಲಿ ಜಿಡಿಪಿ ಕ್ರಮವಾಗಿ ಶೇ 6.1 ವೃದ್ಧಿಯೊಂದಿಗೆ 139.81 ಲಕ್ಷ ಕೋಟಿ ಹಾಗೂ ಶೇ 7 ವೃದ್ಧಿಯೊಂದಿಗೆ ₹ 131.75 ಲಕ್ಷ ಕೋಟಿ ದಾಖಲಾಗಿದೆ ಎಂದುರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

'2017–18 ಮತ್ತು 2018–19ರಆರ್ಥಿಕ ವೃದ್ಧಿ ದರ ಪರಿಷ್ಕರಿಸಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ 'ಮೋದಿ–1'ರ ಅಡಿಯಲ್ಲಿ ಆರ್ಥಿಕತೆಯ ಸ್ಥಿತಿ ತೀರಾ ಕೆಟ್ಟದಾಗಿದೆ' ಎಂದು ಮಾಜಿ ಹಣಕಾಸುಸಚಿವ ಪಿ.ಚಿದಂಬರಂ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT