Budget 2021: ಮೂಲಸೌಕರ್ಯ ಸೌಲಭ್ಯಗಳ ನಿರ್ವಹಣೆ ಹಸ್ತಾಂತರದಿಂದ ಆದಾಯ ಸಂಗ್ರಹ ಗುರಿ

ನವದೆಹಲಿ: ದೇಶದಲ್ಲಿನ ಕೆಲವು ಮೂಲಸೌಕರ್ಯಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿ, ಆ ಮೂಲಕ ಆದಾಯ ಸಂಗ್ರಹ ಹೆಚ್ಚಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
ನಿರ್ಮಾಣ ಕಾರ್ಯ ಬಹುತೇಕ ಮುಗಿದಿರುವ, ಮುಗಿಯುವ ಹಂತದಲ್ಲಿರುವ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು ‘ಟೋಲ್ ಸಂಗ್ರಹ–ನಿರ್ವಹಣೆ–ವರ್ಗಾವಣೆ’ (ಟಿಒಟಿ) ಆಧಾರದಲ್ಲಿ ಖಾಸಗಿಯವರಿಗೆ ನೀಡಿ, ಮುಂದಿನ ಐದು ವರ್ಷಗಳಲ್ಲಿ ₹ 1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ರಸ್ತೆ ಸಾರಿಗೆ, ಹೆದ್ದಾರಿಗಳು ಹಾಗೂ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ಇದೇ ರೀತಿ ಬೇರೆ ವಲಯಗಳಲ್ಲಿನ ಸ್ವತ್ತುಗಳ ನಿರ್ವಹಣೆಯನ್ನು ಬೇರೆಯವರಿಗೆ ನೀಡುವ ಸುಳಿವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್ನಲ್ಲಿ ನೀಡಿದ್ದಾರೆ.
ಆಯ್ದ ರಾಷ್ಟ್ರೀಯ ಹೆದ್ದಾರಿಗಳನ್ನು ಟಿಒಟಿ ಆಧಾರದಲ್ಲಿ ವರ್ಗಾಯಿಸಿ, ನಗದೀಕರಣಗೊಳಿಸುವ ಜವಾಬ್ಧಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ (ಎನ್ಎಚ್ಎಐ) ನೀಡಿರುವುದನ್ನು ಸ್ಮರಿಸಬಹುದು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.