ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ 2020 | ಈ ವರ್ಷವೂ ಸೂಟ್‌ಕೇಸ್ ಇಲ್ಲ

Last Updated 1 ಫೆಬ್ರುವರಿ 2020, 5:20 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ಹಣಕಾಸು ಸಚಿವೆಯಾಗಿ ಎರಡನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿಯೂ‘ಬಹಿ ಖಾತಾ’ (ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ಹೊರಟಿದ್ದಾರೆ.

ಕಳೆದ ಜುಲೈ 5 ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದ ನಿರ್ಮಲಾ,ಬಜೆಟ್ ದಾಖಲೆಗಳನ್ನು ಕೆಂಪು ವಸ್ತ್ರದಲ್ಲಿ ತರುವ ಮೂಲಕ ಹಲವು ವರ್ಷಗಳ ಶಿಷ್ಟಾಚಾರವನ್ನು ಮುರಿದಿದ್ದರು. ಅದುವರೆಗೆ ಬಜೆಟ್‌ ಮಂಡಿಸಿದ್ದ ಎಲ್ಲರೂಚರ್ಮದ ಸೂಟ್ ಕೇಸ್‌ನಲ್ಲಿ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತರುತ್ತಿದ್ದರು.

ಕಳೆದ ವರ್ಷ ಹಣಕಾಸು ಸಚಿವೆಯ ಈ ನಡೆಯನ್ನು ಶ್ಲಾಘಿಸಿದ್ದ ಹಣಕಾಸು ಸಲಹೆಗಾರಕೆ.ಸುಬ್ರಹ್ಮಣ್ಯಂ, ‘ವಸಾಹತು ಮನಃಸ್ಥಿತಿಯಿಂದ ನಾವು ಮುಕ್ತರಾಗಿರುವುದನ್ನು ಈ ಬದಲಾವಣೆಯು ಸಂಕೇತಿಸುತ್ತದೆ’ ಎಂದು ಬಣ್ಣಿಸಿದ್ದರು.

ಬಜೆಟ್ ದಾಖಲೆಗಳನ್ನು ಚರ್ಮದ ಸೂಟ್ ಕೇಸ್‌ನಲ್ಲಿ ತರುವ ಶಿಷ್ಟಾಚಾರವನ್ನು ಮೊದಲ ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಆರಂಭಿಸಿದ್ದರು.

**
ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ
ಬಜೆಟ್ ಬಗ್ಗೆ ಸಮಗ್ರ ವಿವರರಗಳಿಗಾಗಿಈ ವಿಶೇಷ ಪುಟ ನೋಡಿ
ಬಜೆಟ್ ಬಗೆಗಿನ ಎಲ್ಲ ಸುದ್ದಿಗಳು ನಮ್ಮ ಸಾಮಾಜಿಕ ಜಾಲ ತಾಣಗಳಲ್ಲಿಯೂ ಲಭ್ಯವಿದೆ.
ಫೇಸ್‌ಬುಕ್ಪುಟ ಲೈಕ್ ಮಾಡಿ
ಟ್ವಿಟರ್ಫಾಲೋ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT