ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸೆಸ್ ಹೇರಿಕೆ ಬಳಿಕವೂ ಸಾಮಾನ್ಯ ಜನರಿಗೆ ಹೊರೆ ಇಲ್ಲ: ನಿರ್ಮಲಾ ಸೀತಾರಾಮನ್

Last Updated 1 ಫೆಬ್ರುವರಿ 2021, 11:53 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಸರಕುಗಳ ಮೇಲೆ ವಿಧಿಸಲಾಗಿರುವ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ನಿಂದಾಗಿ ಸಾಮಾನ್ಯ ಜನರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ವಿಧಿಸಲಾಗಿದ್ದರೂ ಮೂಲ ಹೆಚ್ಚುವರಿ ತೆರಿಗೆ ಪರಿಷ್ಕರಿಸಿದ್ದರಿಂದ ಗ್ರಾಹಕರ ಹೊರೆಯಾಗುವುದಿಲ್ಲ. ಮದ್ಯದ ತೆರಿಗೆ ಮೇಲೂ ಇದೇ ರೀತಿಯ ಪರಿಷ್ಕರಣೆಯಾಗಿದೆ.

"ಫೆಬ್ರವರಿ 2020 ರಲ್ಲಿ ಆರಂಭವಾದ ಶೇ. 3.5 ರಷ್ಟಿದ್ದ ಹಣಕಾಸಿನ ಕೊರತೆಯು ಜಿಡಿಪಿಯ 9.5 ಪ್ರತಿಶತಕ್ಕೆ ಏರಿದೆ. ಆದ್ದರಿಂದ ನಾವು ಖರ್ಚು ಮಾಡಿದ್ದೇವೆ, ಖರ್ಚು ಮಾಡಿದ್ದೇವೆ ಮತ್ತು ಖರ್ಚು ಮಾಡಿದ್ದೇವೆ. ಅದೇ ಸಮಯದಲ್ಲಿ, ಕೊರತೆ ನಿರ್ವಹಣೆಗೆ ನಾವು ಸ್ಪಷ್ಟವಾದ ಮಾರ್ಗವನ್ನು ನೀಡಿದ್ದೇವೆ, "ಎಂದು ಅವರು ಹೇಳಿದ್ದಾರೆ.

"ನಾವು ಹಣಕಾಸು ಕ್ಷೇತ್ರಕ್ಕೆ ಪ್ರಗತಿಪರ ಕ್ರಮಗಳನ್ನು ಕೈಗೊಂಡಿದ್ದೇವೆ. ಕೃಷಿ ಸೆಸ್‌ನಿಂದಾಗಿ ಗ್ರಾಹಕರು ಯಾವುದೇ ಉತ್ಪನ್ನಕ್ಕೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿಲ್ಲ" ಎಂದು ಅವರು ಹೇಳಿದರು.

ಇದೇವೇಳೆ, ಕೊರೊನಾ ಸಂಕಷ್ಟದ ಸಮಯದಲ್ಲಿ ಬಂಡವಾಳ ವೆಚ್ಚ ವಿಳಂಬವಾಗಲಿಲ್ಲ ಎಂದು ಸಚಿವರು ಹೇಳಿದ್ದಾರೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT