2025-26ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರುವರಿ 1 ರಂದು ಮಂಡನೆಯಾಗಲಿದೆ. ಕೆಲ ತಿಂಗಳ ಹಿಂದೆ ಜಿಎಟ್ಟಿ ಸ್ಲ್ಯಾಬ್ ಕಡಿತಗೊಳಿಸಿದ ಬಳಿಕ, ಬಡ ಹಾಗೂ ಮಧ್ಯಮ ವರ್ಗದ ಜನರು ಈ ಬಾರಿ ಬಜೆಟ್ನಲ್ಲಿ ಹಲವು ಕೊಡುಗೆಗಳ ನಿರೀಕ್ಷೆಯಲ್ಲಿದ್ದಾರೆ. ಆದಾಯ ತೆರಿಗೆ ಪಾವತಿದಾರರೂ ಕೂಡ ಬಜೆಟ್ ಎದುರ ನೋಡುತ್ತಿದ್ದಾರೆ. ಈ ಬಾರಿ ನೇರ ತೆರಿಗೆಯಲ್ಲಿ ಸರ್ಕಾರ ಮಾಡಬಹುದಾದ ಬದಲಾವಣೆಗೆಳು ಇಲ್ಲಿವೆ.
.ಕೇಂದ್ರ ಬಜೆಟ್: ಫೆ.1 ಭಾನುವಾರ ಷೇರುಪೇಟೆ ಓಪನ್.
ಆದಾಯ ತೆರಿಗೆ ಸ್ಲ್ಯಾಬ್

ಕಳೆದ ಮೂರು ವರ್ಷಗಳಿಂದ ಹೊಸ ತೆರಿಗೆ ಪದ್ಧತಿ ಅನ್ವಯ ಸ್ಲ್ಯಾಬ್ಗಳು ಬದಲಾಗಿವೆ. ತೆರಿಗೆ ಪಾವತಿದಾರರಿಗೆ ಅದರಿಂದ ಲಾಭವೂ ಆಗಿದೆ. ಸತತವಾಗಿ ಲಾಭಗಳು ನೀಡಿದ್ದರಿಂದ ಈ ಬಾರಿ ಆದಾಯ ತೆರಿಗೆ ಸ್ಲ್ಯಾಬ್ ವಿಚಾರದಲ್ಲಿ ಬದಲಾವಣೆ ಬಗ್ಗೆ ಘೋಷಣೆ ಇರುವುದು ಅನುಮಾನ.

ಟಿಡಿಎಸ್ನಲ್ಲಿ ಬದಲಾವಣೆ

ಸದ್ಯ ವಿವಿಧ ವ್ಯವಹಾರಗಳಿಗೆ ಹಲವು ಬಗೆಯ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ವ್ಯಾಪಾರ ಮತ್ತು ಹೂಡಿಕೆದಾರರಿಗೆ ಇದನ್ನು ಮತ್ತಷ್ಟು ಸರಳಗೊಳಿಸಲು ಒಂದೇ ದರ ಟಿಡಿಎಸ್ ಪರಿಚಯಿಸುವ ಸಾಧ್ಯತೆ ಇದೆ. ಹಲವು ದರ ಟಿಡಿಎಸ್ ಅನ್ನು 2–3ಕ್ಕೆ ಇಳಿಸುವ ಸಾಧ್ಯತೆ ಇದೆ.
.ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ.
ಹಳೆ ತೆರಿಗೆ ಪದ್ಧತಿ ಮುಂದುವರಿಕೆ

ಕಳೆದ ಹಲವು ವರ್ಷಗಳಿಂದ ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ಬದಲಾವಣೆಗೆಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಹೀಗಾಗಿ ಹಳೆ ತೆರಿಗೆ ಪದ್ಧತಿ ಮುಂದಿನ ಕೆಲ ವರ್ಷಗಳಲ್ಲಿ ರದ್ದಾಗಬಹುದೆಂದು ಈ ಹಿಂದೆಯೇ ಅಂದಾಜಿಸಲಾಗಿತ್ತು. ಹಲವು ಮಂದಿ ಈಗಲೂ ಹಳೆ ತೆರಿಗೆ ಪದ್ಧತಿಯನ್ನೇ ಬಳಸುತ್ತಿರುವುದರಿಂದ ಈ ಬಾರಿಯ ಬಜೆಟ್ನಲ್ಲಿ ಹಳೆ ಪದ್ಧತಿ ಮುಂದುವರಿಯುವ ಸಾಧ್ಯತೆ ಇದೆ.

ಸೆಕ್ಷನ್ 24 (ಬಿ) ಅಡಿ ಬಡ್ಡಿ ಕಡಿತ

ಹಳೆ ತೆರಿಗೆ ಪದ್ಧತಿ ಅನ್ವಯ ಮನೆ ನಿರ್ಮಾಣ, ದುರಸ್ತಿಗೆ ಪಡೆದ ಸಾಲದ ಮೇಲೆ ಪಾವತಿಸುವ ₹ 2 ಲಕ್ಷದ ವರೆಗಿನ ಬಡ್ಡಿಗೆ ತೆರಿಗೆ ಸೆಕ್ಷನ್ 24 (ಬಿ) ವಿನಾಯಿತಿ ಇತ್ತು. ಇದು ಹೆಚ್ಚಳವಾಗುವ ನಿರೀಕ್ಷೆ ಇದೆ.

ದಂಪತಿಗೆ ಜಂಟಿ ತೆರಿಗೆ

ಸರಿಯಾದ ಸಮಯಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಪ್ರೇರೇಪಿಸಲು ಮದುವೆಯಾದ ಜೋಡಿಗೆ ಜಂಟಿ ಆದಾಯ ತೆರಿಗೆ ವಿಧಿಸುವ ಪ್ರಸ್ತಾಪ ಮುಂಬರುವ ಬಜೆಟ್ನಲ್ಲಿ ಇರುವ ಸಾಧ್ಯತೆ ಇದೆ. ಇದರ ಜೊತೆಗೆ ಹಲವು ಕೊಡುಗೆಗಳೂ ಸಿಗುವ ನಿರೀಕ್ಷೆಯೂ ಇದೆ.ತೆರಿಗೆ
.ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?.
ಇ.ವಿಗಳಿಗೆ ಕಾರು ಸೌಲಭ್ಯ ಮೌಲ್ಯಮಾಪನ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 17 (3) ಅಡಿ, ತೆರಿಗೆ ಪಾವತಿದಾರನಿಗೆ ಉದ್ಯೋಗದಾತ ನೀಡಿದ ಕಾರಿನ ಸೌಲಭ್ಯದ ಮೌಲ್ಯಮಾಪನ ಮಾಡಲಾಗುತ್ತದೆ. ಇದನ್ನು ಕಾರಿಗೆ ಕ್ಯೂಬಿಕ್ ಸಾಮರ್ಥ್ಯದಿಂದ ಅಳೆಯಲಾಗುತ್ತದೆ. ಆದರೆ ಇದು ಇವಿ ವಾಹನಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಇದಕ್ಕೆ ತಿದ್ದುಪಡಿಯನ್ನು ನಿರೀಕ್ಷಿಸಲಾಗಿದೆ.
.ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.