ನವದೆಹಲಿ: ಉನ್ನತ ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರ ಪರಸ್ಪರ ಪೂರಕವಾಗಿರಬೇಕು, ಶಿಕ್ಷಣ, ಕೌಶಲಗಳು ಒಂದು ಕಡೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.

ಐದು ‘ವಿಶ್ವವಿದ್ಯಾಲಯ ಟೌನ್ಶಿಪ್’ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ರಾಜ್ಯಗಳಿಗೆ ನೆರವು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಮುಖ ಕೈಗಾರಿಕೆಗಳ ಸನಿಹದಲ್ಲಿ ಈ ‘ವಿಶ್ವವಿದ್ಯಾಲಯ ಟೌನ್ಶಿಪ್’ಗಳು ಸ್ಥಾಪನೆ ಆಗಲಿದ್ದು, ಸುಸಜ್ಜಿತವಾದ ಶೈಕ್ಷಣಿಕ ವಲಯಗಳಾಗಿರಲಿದ್ದು, ವಿಶ್ವವಿದ್ಯಾಲಯ, ಕಾಲೇಜುಗಳು, ಸಂಶೋಧನಾ ಕೇಂದ್ರಗಳು, ಕೌಶಲ ಅಭಿವೃದ್ಧಿ ಕೇಂದ್ರಗಳು, ವಸತಿ ಸಮುಚ್ಚಯಗಳಿರಲಿವೆ.

ಉನ್ನತ ಶಿಕ್ಷಣ: ಉನ್ನತ ಶಿಕ್ಷಣದಲ್ಲಿ ‘ಸ್ಟೆಮ್’ಗೆ (ವಿಜ್ಞಾನ, ತಂತ್ರಜ್ಞಾನ,ಎಂಜಿನಿಯರಿಂಗ್ ಹಾಗೂ ಗಣಿತ) ಪ್ರಸ್ತುತ ಹೆಚ್ಚು ಪ್ರಾಮುಖ್ಯವಿದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿನಿಯರು ಅಧ್ಯಯನ ಹಾಗೂ ಪ್ರಯೋಗಾಲಯ ಕಾರ್ಯಗಳಲ್ಲಿ ದೀರ್ಘ ಸಮಯ ಕಳೆಯುತ್ತಿರುತ್ತಾರೆ. ಹೀಗಾಗಿ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸುವ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.

ಖಭೌತವಿಜ್ಞಾನ ಹಾಗೂ ಖಗೋಳವಿಜ್ಞಾನ ಅಧ್ಯಯನಕ್ಕೆ ಉತ್ತೇಜನ ನೀಡುವುದಕ್ಕಾಗಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.

‘ಇಮ್ಮರ್ಸಿವ್’ ವಿಧಾನದ ಮೂಲಕ ಆಸಕ್ತಿ ಮೂಡಿಸುವುದು, ನಾಲ್ಕು ಟೆಲಿಸ್ಕೋಪ್ ಮೂಲಸೌಕರ್ಯ ಕೇಂದ್ರಗಳನ್ನು ಹಾಗೂ ಎರಡು ತಾರಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

‘ವೈದ್ಯಕೀಯ ಸೇವಾ ಹಬ್ ಆಗಿ ಭಾರತ’

ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಲ್ಲದೆ, ಭಾರತವನ್ನು ‘ವೈದ್ಯಕೀಯ ಪ್ರವಾಸೋದ್ಯಮ ಸೇವಾ ಕ್ಷೇತ್ರದ ಹಬ್’ ಆಗಿ ರೂಪಿಸುವ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.

ಇದಕ್ಕಾಗಿ, ಖಾಸಗಿ ಸಹಯೋಗದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಹಬ್ಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ನೆರವು ನೀಡಲಾಗುತ್ತದೆ. ಈ ಹಬ್ಗಳು ಸಮಗ್ರ ಆರೋಗ್ಯ ಸೇವೆಯ ಸಂಕೀರ್ಣಗಳಾಗಿರಲಿದ್ದು, ವೈದ್ಯಕೀಯ ಸೇವೆ ಜೊತೆಗೆ ವೈದ್ಯಕೀಯ ಶಿಕ್ಷಣ, ಸಂಶೋಧನಾ ಸೌಲಭ್ಯಗಳನ್ನು ಒಳಗೊಂಡಿರಲಿವೆ ಎಂದು ಪ್ರಸ್ತಾಪಿಸಲಾಗಿದೆ.

ಆಯುಷ್ ಕೇಂದ್ರಗಳು, ವೈದ್ಯಕೀಯ ಪ್ರವಾಸೋದ್ಯಮ ಉತ್ತೇಜನಾ ಕೇಂದ್ರಗಳ ಜೊತೆಗೆ, ರೋಗಪತ್ತೆ ಸೌಲಭ್ಯಗಳು, ಚಿಕಿತ್ಸೆ ಬಳಿಕೆ ಆರೈಕೆ ಹಾಗೂ ಪುನರ್ವಸತಿ ಸೌಕರ್ಯಗಳನ್ನೂ ಈ ಹಬ್ಗಳು ಒಳಗೊಂಡಿರಲಿವೆ.

ಭಾರತೀಯ ವೈದ್ಯ ಪದ್ಧತಿಗೆ ಉತ್ತೇಜನ ನೀಡಲು ಮೂರು ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ. ಜೊತೆಗೆ, ಆಯುಷ್ ಔಷಧ ಕೇಂದ್ರಗಳು, ಅವುಗಳ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಸಹ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.

ಆಪ್ಟೊಮೆಟ್ರಿ, ರೇಡಿಯೊಲಜಿ, ಅನಸ್ತೇಷಿಯಾ, ಒ.ಟಿ ಟೆಕ್ನಾಲಜಿ, ಅನ್ವಯಿಕ ಮನೋವಿಜ್ಞಾನ ಮತ್ತು ವರ್ತನೆ ಆರೋಗ್ಯದಂತಹ ವೈದ್ಯಕೀಯ ವೃತ್ತಿಗೆ ಪೂರಕವಾದ ಕೋರ್ಸ್ಗಳ (ಎಎಚ್ಪಿ) ಕಲಿಕೆಗೆ ಉತ್ತೇಜನ ನೀಡುವ ಪ್ರಸ್ತಾಪವನ್ನು ಮಂಡಿಸಲಾಗಿದೆ.

ಈ ಸ್ವರೂಪದ ಶಿಕ್ಷಣವನ್ನು ನೀಡುವ ಖಾಸಗಿ ಮತ್ತು ಸರ್ಕಾರಿ ವಲಯದ ಕೇಂದ್ರಗಳನ್ನು (ಎಎಚ್ಪಿ) ಮೇಲ್ದರ್ಜೆಗೇರಿಸಲಾಗುವುದು. ಇದರಿಂದ, ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ವೃತ್ತಿಪರರನ್ನು (ಅಲೈಡ್ ಹೆಲ್ತ್ ಪ್ರೊಫೆಷನಲ್) ಸೇವೆಗೆ ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
.Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆ.
1. ಉನ್ನತ ಮಟ್ಟದ ‘ಶಿಕ್ಷಣದಿಂದ ಉದ್ಯೋಗ ಹಾಗೂ ಉದ್ಯಮಶೀಲತೆ’ಸ್ಥಾಯಿ ಸಮಿತಿ ರಚನೆ.

2. ಆಯ್ದ ಹತ್ತು ವಿಭಾಗಗಳಲ್ಲಿ ಆರೋಗ್ಯ ವೃತ್ತಿ ಸಂಬಂಧಿಸಿದವರಿಗೆ ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು ಹಾಗೂ ಮೇಲ್ದರ್ಜೆಗೇರಿಸುವುದು.

3. 1.5 ಲಕ್ಷ ಬಹು ಕೌಶಲ್ಯಪೂರ್ಣ ಆರೈಕೆದಾರರಿಗೆ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಯೋಜನೆಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು.

4. ಖಾಸಗಿ ವಲಯದ ಸಹಭಾಗಿತ್ವದಲ್ಲಿ ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮಕ್ಕಾಗಿ ಐದು ಕೇಂದ್ರಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳಿಗೆ ಬೆಂಬಲ.
.Union Budget 2026: ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ.
5. ಮೂರು ಹೊಸ ಭಾರತೀಯ ಆಯುರ್ವೇದ ಸಂಸ್ಥೆ ಸ್ಥಾಪನೆ. ಆಯುಷ್ ಔಷಧಾಲಯಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸುವುದು.

6. 1500 ಶಾಲೆಗಳಲ್ಲಿ ಹಾಗೂ 500 ಕಾಲೇಜುಗಳಲ್ಲಿ ಅನಿಮೇಷನ್, ವಿಷ್ಯುವಲ್ ಎಫೆಕ್ಸ್ಟ್ , ಗೇಮಿಂಗ್ ಮತ್ತು ಕಾಮಿಕ್ಸ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ

7. ಖೆಲೋ ಇಂಡಿಯಾ ಅಭಿಯಾನಕ್ಕೆ ಉತ್ತೇಜನ
.Union Budget| ಯಾವ ಹೈಸ್ಪೀಡ್ ರೈಲೂ ಬರಲ್ಲ: ಡಿಸಿಎಂ ಡಿಕೆಶಿ ವ್ಯಂಗ್ಯ.
8. ಶಿಕ್ಷಣ

ಪ್ರಮುಖ ಕೈಗಾರಿಕಾ ಹಾಗೂ ಸರಕು ಕಾರಿಡಾರ್ಗಳಲ್ಲಿ 5 ವಿಶ್ವವಿದ್ಯಾಲಯ ಟೌನ್ಶಿಪ್ ನಿರ್ಮಾಣ.

ಉನ್ನತ ಶಿಕ್ಷಣಕ್ಕೆ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ

ದೂರದರ್ಶಕ ಮೂಲಸೌಕರ್ಯ ಸೌಲಭ್ಯಗಳ ನಿರ್ಮಾಣ ಅಥವಾ ಉನ್ನತೀಕರಣ.

9. ಪ್ರವಾಸೋದ್ಯಮ

ಭಾರತೀಯ ಆತಿಥ್ಯ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ) ಸ್ಥಾಪನೆ

ದೇಶದ 20 ಐತಿಹಾಸಿಕ ಸ್ಥಳಗಳಿಗೆ ಹತ್ತು ಸಾವಿರ ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಿ, ಅವರಿಗೆ ಉನ್ನತ ಮಟ್ಟದ ತರಬೇತಿ

ಪ್ರವಾಸಿಗರಿಗೆ ಅನುಕೂಲವಾಗಲು ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ಸ್ಥಳಗಳ ಮಾಹಿತಿಗಳ ಡಿಜಟಲೀಕರಣ.

ಭಾರತದಲ್ಲಿ ವಿಶ್ವದ ಮೊದಲ ಜಾಗತಿಕ ಹುಲಿ ಸಮ್ಮೇಳನ ನಡೆಸುವುದು

ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಸರ್ಕೀಟ್ ಅಭಿವೃದ್ಧಿ

.Union Budget 2026: ಗ್ರಾಮೀಣ ಮಹಿಳೆಯರಿಗೆ ಒತ್ತು ನೀಡಿದ ನಿರ್ಮಲಾ ಸೀತಾರಾಮನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.