ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ಬಳಸಿ, ಇಎಂಐ ಉಳಿಸಿ..!

Last Updated 3 ಮೇ 2020, 20:00 IST
ಅಕ್ಷರ ಗಾತ್ರ
ADVERTISEMENT
""
""
""

‘ಕೋವಿಡ್-19’ ಪಿಡುಗಿನಿಂದಾಗಿ ಎಲ್ಲರೂ ಅರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮಿತವ್ಯಯ ಮತ್ತು ಉಳಿತಾಯಕ್ಕೆ ಮುಂದಾಗಬೇಕು. ಹೌದು, ಗೃಹ ಸಾಲದ ಮೇಲಿನ ಹೊರೆಯನ್ನು ಒಂದಷ್ಟು ಇಳಿಸಿಕೊಳ್ಳಲು ಈಗ ಸೂಕ್ತ ಸಮಯ. ರೆಪೊ ದರವನ್ನು ಆರ್‌ಬಿಐ ಇಳಿಕೆ ಮಾಡಿರುವುದರಿಂದ, ರೆಪೊ ಆಧರಿತ ಗೃಹ ಸಾಲಗಳ ಬಡ್ಡಿ (Repo Linked Loan) ಕಡಿಮೆಯಾಗಿದೆ. ದುಬಾರಿ ಬಡ್ಡಿ ದರಗಳಲ್ಲಿ ಗೃಹ ಸಾಲ ಪಡೆದಿರುವವರು ರೆಪೊ ಆಧಾರಿತ ಸಾಲಕ್ಕೆ ಅದನ್ನು ವರ್ಗಾಯಿಸಿಕೊಂಡರೆ ಬಡ್ಡಿ ಹೊರೆ ಇಳಿಕೆಯ ಜತೆಗೆ ಒಟ್ಟು ಮಾಸಿಕ ಕಂತುಗಳ ಸಂಖ್ಯೆಯೂ ತಗ್ಗುತ್ತದೆ. ಈ ನಿಟ್ಟಿನಲ್ಲಿ ಪೂರಕ ಮಾಹಿತಿ ಇಲ್ಲಿದೆ.

ಏನಿದು ರೆಪೊ ದರ: ಆರ್‌ಬಿಐ ತನ್ನ ಸಹವರ್ತಿ ಬ್ಯಾಂಕ್‌‌ಗಳಿಗೆ ಸಾಲ ನೀಡುತ್ತದೆ. ಈ ಸಾಲದ ಮೇಲೆ ನಿಗದಿ ಮಾಡುವ ಬಡ್ಡಿ ದರವನ್ನು ರೆಪೊ ಎನ್ನಲಾಗುತ್ತದೆ.

ಸದ್ಯ ರೆಪೊ ದರ 4.4 ರಷ್ಟಿದೆ. ಮಾರ್ಚ್‌ನಲ್ಲಿ ಆರ್‌ಬಿಐ ರೆಪೊ ದರವನ್ನು 5.15 ರಿಂದ 4.4 ಕ್ಕೆ ಇಳಿಸಿದೆ. 2019 ಅಕ್ಟೋಬರ್ 1 ರಿಂದ ರೆಪೊ ಬಡ್ಡಿ ದರಕ್ಕೆ ಅನುಗುಣವಾಗಿ ಸಾಲ ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್‌ಬಿಐ) ಎಲ್ಲ ವಾಣಿಜ್ಯ ಬ್ಯಾಂಕ್‌‌ಗಳಿಗೆ ನಿರ್ದೇಶಿಸಿದೆ. ಆರ್‌ಬಿಐ ರೆಪೊ ದರ ಕಡಿತಗೊಳಿಸಿದರೂ ಅದರ ಅನುಕೂಲವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಲು ಮೀನಮೇಷ ಎಣಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ರೆಪೊ ಆಧಾರಿತ ಸಾಲಗಳನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಆದರೂ ಕೆಲ ಬ್ಯಾಂಕ್‌ಗಳು ರೆಪೊ ಆಧಾರಿತ ಸಾಲಗಳ ಬಗ್ಗೆ ಗ್ರಾಹಕರಿಗೆ ಅಷ್ಟಾಗಿ ಮಾಹಿತಿ ನೀಡುತ್ತಿಲ್ಲ.

ಏನಿದು ರೆಪೊ ಆಧಾರಿತ ಸಾಲ: ಆರ್‌ಬಿಐನ ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲಗಳ ಬಡ್ಡಿ ದರಗಳನ್ನು ನಿಗದಿ ಮಾಡುವುದಕ್ಕೆ ರೆಪೊ ಆಧಾರಿತ ಸಾಲ ಎನ್ನಬಹುದು.

ಈ ಆಧಾರದಲ್ಲಿ ಸಾಲ ಪಡೆಯಲು ಸಾಧ್ಯವಿದೆ. ಈಗಾಗಲೇ ಸಾಲ ಪಡೆದಿರುವವರು ಬ್ಯಾಂಕ್‌ ಜತೆ ಮಾತುಕತೆ ನಡೆಸಿ ರೆಪೊ ಆಧಾರಿತ ಸಾಲಕ್ಕೆ ಬಾಕಿಯನ್ನು ವರ್ಗಾಯಿಸಿಕೊಳ್ಳಲು ಸಾಧ್ಯವಿದೆ. ಆದರೆ ಅದಕ್ಕೆ ಒಂದಿಷ್ಟು ಶುಲ್ಕ ಕಟ್ಟಬೇಕಾಗುತ್ತದೆ. ‘ಎಂಸಿಎಲ್‌ಆರ್’ ಅಂದರೆ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ ನಿರ್ಧರಿಸುವ ಬಡ್ಡಿ ದರದಡಿಯಲ್ಲಿ ಸಾಲ ಪಡೆದಿರುವವರು ಕೂಡ ರೆಪೊ ಆಧಾರಿತ ಸಾಲಕ್ಕೆ ಬಾಕಿ ಮೊತ್ತ ವರ್ಗಾಯಿಸಿಕೊಳ್ಳಬಹುದು.

ಷೇರುಪೇಟೆಯಲ್ಲಿ ಚೇತರಿಕೆ
‘ಕೋವಿಡ್-19’ ಪಿಡುಗಿನಿಂದಾಗಿ ಎದುರಾಗಿರುವ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಏಪ್ರಿಲ್‌ನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಶೇ 14 ರಷ್ಟು ಜಿಗಿತ ಕಂಡಿವೆ. ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್ ಶೇ 14.42 ರಷ್ಟು ಜಿಗಿದಿದ್ದರೆ, ನಿಫ್ಟಿ ಶೇ 14.68 ರಷ್ಟು ಏರಿಕೆ ಕಂಡಿದೆ. ಸ್ಮಾಲ್ ಕ್ಯಾಪ್ ಸೂಚ್ಯಂಕ ಸಹ ಶೇ 13.66 ರಷ್ಟು ಚೇತರಿಸಿಕೊಂಡಿದೆ. ಸೆಪ್ಟೆಂಬರ್ 2009 ರ ನಂತರದಲ್ಲಿನ ಅತ್ಯುತ್ತಮ ಮಾಸಿಕ ಫಲಿತಾಂಶ ಇದಾಗಿದೆ. ಮಾರ್ಚ್‌ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ 23 ರಷ್ಟು ಕುಸಿತ ದಾಖಲಿಸಿದ್ದವು.

ವಾರದ ಅವಧಿಯಲ್ಲಿ 33,717 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್‌, ಶೇ 7.6 ರಷ್ಟು ಜಿಗಿತ ಕಂಡಿದೆ. ಶೇ 7.7 ರಷ್ಟು ಏರಿಕೆ ಕಂಡಿರು ವ ನಿಫ್ಟಿ 9,859 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಲಾಕ್‌ಡೌನ್ ಸಡಿಲ, ನಗದು ಲಭ್ಯತೆಗೆ ಆರ್‌ಬಿಐ ಕೈಗೊಂಡ ಕ್ರಮಗಳು, ಜಾಗತಿಕ ಮಾರುಕಟ್ಟೆಗಳ ಚೇತರಿಕೆ, ಕೋವಿಡ್‌ಗೆ ಲಸಿಕೆ ವಿಚಾರವಾಗಿ ಸಕಾರಾತ್ಮಕ ಬೆಳವಣಿಗೆಗಳು ಸೇರಿ ಹಲವು ಅಂಶಗಳು ಮಾರುಕಟ್ಟೆಯಲ್ಲಿನ ಉತ್ಸಾಹಕ್ಕೆ ಕಾರಣವಾಗಿದ್ದವು.

ಮಾರ್ಚ್ 23 ರ ನಂತರದಲ್ಲಿ ನಿಫ್ಟಿ 2,250 ಅಂಶಗಳ ಏರಿಕೆ ಕಂಡಿದೆ. ರಿಲಯನ್ಸ್ ಇಂಟಸ್ಟ್ರೀಸ್ ಲಿ 442.48 , ಎಚ್‌ಡಿಎಫ್‌ಸಿ ಬ್ಯಾಂಕ್ 186.33, ಇನ್ಫೊಸಿಸ್ 170.99, ಎಚ್‌ಡಿಎಫ್‌ಸಿ 3.79 ಅಂಶಗಳ ಕೊಡುವೆ ನೀಡಿವೆ.

ಮುನ್ನೋಟ: ಈ ವಾರ ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್, ಯೆಸ್ ಬ್ಯಾಂಕ್, ಮಾರಿಕೊ, ಎಸ್‌ಬಿಐ ಲೈಫ್, ನೆರೊಲ್ಯಾಕ್ ಪೇಂಟ್ಸ್ , ಅದಾನಿ ಪೋರ್ಟ್ಸ್ ಸೇರಿ ಸುಮಾರು 24 ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಮುನ್ಸೂಚನೆ ನೀಡಿದ್ದಾರೆ. ‘ಕೋವಿಡ್ 19’ ನ ಪರಿಸ್ಥಿತಿ, ಲಾಕ್‌ಡೌನ್‌ನಲ್ಲಿ ಕಾಲ ಕ್ರಮೇಣ ಆಗುವ ಬದಲಾವಣೆಗಳು ಕೂಡ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ, ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT