ವರದಿಯೊಂದರ ಪ್ರಕಾರ ಕೃತಕ ಬುದ್ಧಿಮತ್ತೆ (ಎ.ಐ), ಆರ್ಥಿಕ ಅನಿಶ್ಚಿತತೆಯ ಭೀತಿ, ವೆಚ್ಚ ಕಡಿತ ಸೇರಿದಂತೆ ಹಲವು ಕಾರಣಗಳಿಂದಾಗಿ 2025ರಲ್ಲಿ ಈವರೆಗೆ ಅಂದಾಜು 1 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ವಿವಿಧ ವಲಯಗಳ ತಜ್ಞರ ಅಂದಾಜಿನ ಪ್ರಕಾರ ಎ.ಐ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಸುಮಾರು 1.2 ಕೋಟಿಯಿಂದ 1.8 ಕೋಟಿ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕೆಲಸ ಕಳೆದುಕೊಳ್ಳುವುದು ಮಾನಸಿಕ ನೆಮ್ಮದಿ ಕೆಡಿಸುವುದಲ್ಲದೆ, ಕುಟುಂಬದ ಹಣಕಾಸಿನ ಪರಿಸ್ಥಿತಿಯನ್ನೂ ಹಾಳು ಮಾಡುತ್ತದೆ. ಉದ್ಯೋಗ ನಷ್ಟದಂತಹ ಸಂದರ್ಭದಲ್ಲಿ ಸಾಲದ ಮಾಸಿಕ ಕಂತಿನ (ಇಎಂಐ) ಭಾರ ಹೊರುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಸಾಲ ಮಾಡುವಾಗ ಇವನ್ನು ಮರೆಯಬೇಡಿ: ಗೃಹಸಾಲದಂತಹ ದೀರ್ಘಾವಧಿ ಸಾಲಗಳನ್ನು ಪಡೆಯುವಾಗ ನಿಮ್ಮ ಆದಾಯದ ಶೇ 30ರಿಂದ ಶೇ 35ರಷ್ಟು ಮೊತ್ತ ಮಾತ್ರ ಸಾಲದ ಕಂತಿಗೆ ಹೋಗುವಂತೆ ನೋಡಿಕೊಳ್ಳಿ. ನಿಮ್ಮ ಆದಾಯ ₹1 ಲಕ್ಷವಿದ್ದರೆ ನಿಮ್ಮ ಸಾಲದ ಮಾಸಿಕ ಕಂತು (ಇಎಂಐ) ₹30 ಸಾವಿರದಿಂದ ₹35 ಸಾವಿರ ಮೀರದಿರಲಿ. ಈ ಮಿತಿಯನ್ನು ಮೀರಿ ಸಾಲ ಮಾಡಿದಾಗ ಉಳಿತಾಯ ಮತ್ತು ಹೂಡಿಕೆ ಮಾಡಲು ಹಣವಿರುವುದಿಲ್ಲ. ಉದ್ಯೋಗ ಕಳೆದುಕೊಂಡ ಸಂದರ್ಭಗಳಲ್ಲಿ ಸಾಲದ ಹೊರೆ ಹೊರುವುದು ಕಷ್ಟವಾಗುತ್ತದೆ. ನಿಮ್ಮ ತಿಂಗಳ ಖರ್ಚಿನ 12 ಪಟ್ಟು ಮೊತ್ತವನ್ನು ಲಿಕ್ವಿಡ್ ಫಂಡ್ ಅಥವಾ ನಿಶ್ಚಿತ ಠೇವಣಿಯಲ್ಲಿ ಇರಿಸಿಕೊಳ್ಳಿ. ಇದು ಉದ್ಯೋಗ ನಷ್ಟದಂತಹ ಕಷ್ಟಕಾಲಕ್ಕೆ ತುರ್ತು ನಿಧಿಯಾಗಿ ಕೆಲಸ ಮಾಡುತ್ತದೆ.

ಸಾಲದ ಇಎಂಐ ಒಳಗೊಂಡು ನಿಮ್ಮ ಮಾಸಿಕ ವೆಚ್ಚ ₹75 ಸಾವಿರ ಆದಲ್ಲಿ ನಿಮ್ಮ ಬಳಿ ₹9 ಲಕ್ಷ ತುರ್ತು ನಿಧಿಯಿರಲಿ. ಇದು ಇದ್ದಾಗ ಮತ್ತೊಂದು ಕೆಲಸ ಹುಡುಕುವ ಪ್ರಯತ್ನವನ್ನು ಹೆಚ್ಚು ತಲೆಬಿಸಿಯಿಲ್ಲದೆ ಮಾಡುವ ಜೊತೆಗೆ 12 ತಿಂಗಳ ಖರ್ಚನ್ನು ನಿಭಾಯಿಸಿಕೊಳ್ಳಬಹುದು. ಇಷ್ಟೇ ಅಲ್ಲ, ಮನೆಯ ಹಣಕಾಸಿನ ಜವಾಬ್ದಾರಿಯಿರುವ ಯಜಮಾನಿ/ಯಜಮಾನ ಕಡ್ಡಾಯವಾಗಿ ಅವಧಿ ವಿಮೆ ತೆಗೆದುಕೊಳ್ಳಬೇಕು. ಈ ವಿಮೆ ಸಂಕಷ್ಟ ಕಾಲದಲ್ಲಿ ಕುಟುಂಬಕ್ಕೆ ಹಣಕಾಸಿನ ನೆರವು ಒದಗಿಸುತ್ತದೆ. ವ್ಯಕ್ತಿಯ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಈ ವಿಮೆ ಪರಿಹಾರ ನೀಡುತ್ತದೆ. ವ್ಯಕ್ತಿಯೊಬ್ಬ ₹50 ಲಕ್ಷ, ₹1 ಕೋಟಿ, ₹2 ಕೋಟಿಗೆ ಅವಧಿ ವಿಮೆ ತೆಗೆದುಕೊಂಡಿದ್ದು ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ವಿಮಾ ರಕ್ಷೆಯ ಪೂರ್ಣ ಮೊತ್ತ ಸಂದಾಯವಾಗುತ್ತದೆ. ಸಾಲವಿದ್ದವರಷ್ಟೇ ಅಲ್ಲ, ಸಾಲವಿಲ್ಲದವರೂ ಅವಧಿ ವಿಮೆ ತೆಗೆದುಕೊಳ್ಳಬೇಕು.

ಈಗಿನ ಆರ್ಥಿಕ ಸ್ಥಿತಿಯ ಅಂದಾಜು: ಉದ್ಯೋಗವಿಲ್ಲದ ಸಂದರ್ಭದಲ್ಲಿ ಇಎಂಐ ನಿಭಾಯಿಸುವುದು ಕಷ್ಟ. ಆದರೆ ಮೇಲೆ ತಿಳಿಸಿದ ಹಾಗೆ ಹಣಕಾಸು ನಿರ್ವಹಣೆಯ ಶಿಸ್ತು ರೂಢಿಸಿಕೊಂಡಿದ್ದರೆ ಅದನ್ನು ನಿಭಾಯಿಸುವುದು ಅಸಾಧ್ಯದ ಕೆಲಸವೇನಲ್ಲ. ಉದ್ಯೋಗ ನಷ್ಟ ಆದ ತಕ್ಷಣ ನಿಮ್ಮ ವೇತನದ ಖಾತೆಯಲ್ಲಿನ ತುರ್ತು ನಿಧಿಯಲ್ಲಿ ಎಷ್ಟು ಹಣವಿದೆ ನೋಡಿ. ಆ ಮೊತ್ತದಿಂದ ಎಷ್ಟು ತಿಂಗಳ ಇಎಂಐ ನಿಭಾಯಿಸಬಹುದು ಅಂದಾಜು ಮಾಡಿ. ನಿಮ್ಮ ತಿಂಗಳ ಖರ್ಚು ವೆಚ್ಚಗಳ ಅಂದಾಜನ್ನು ತೆಗೆದುಕೊಳ್ಳಿ. ಆಹಾರ, ಆರೋಗ್ಯ ನಿರ್ವಹಣೆ, ಅಗತ್ಯ ವಸ್ತುಗಳ ಖರೀದಿಗೆ ವಿನಿಯೋಗವಾಗುವ ಮೊತ್ತವೆಷ್ಟು ಮತ್ತು ಹೊರಗೆ ಊಟ ಮಾಡುವುದು, ಒಟಿಟಿ ಚಂದಾದಾರಿಕೆ, ಸಿನಿಮಾ, ಪ್ರವಾಸದಂತಹ ಅತ್ಯಗತ್ಯವಲ್ಲದ ಉದ್ದೇಶಗಳಿಗೆ ಖರ್ಚಾಗುವ ಹಣವೆಷ್ಟು ಲೆಕ್ಕಚಾರ ಮಾಡಿ. ಅಗತ್ಯವಲ್ಲದ ಖರ್ಚುಗಳನ್ನು ಪೂರ್ತಿ ನಿಯಂತ್ರಿಸಿ, ಇಲ್ಲವಾದಲ್ಲಿ ಅದಕ್ಕೆ ಮಿತಿ ಹೇರಿ. ಹೀಗೆ ಮಾಡಿದಾಗ ನಿಮ್ಮ ಬಳಿ ಹಣದ ಲಭ್ಯತೆ ಕೊಂಚ ಹೆಚ್ಚುತ್ತದೆ. ಮತ್ತಷ್ಟು ತಿಂಗಳ ಇಎಂಐ ಕಟ್ಟಲು ಸಾಧ್ಯವಾಗುತ್ತದೆ.

ಬ್ಯಾಂಕ್ ಅನ್ನು ಸಂಪರ್ಕಿಸಿ: ಉದ್ಯೋಗ ನಷ್ಟವಾದಂತಹ ಸಂದರ್ಭದಲ್ಲಿ ಸಾಲ ಪಡೆದಿರುವ ಬ್ಯಾಂಕ್ ಅನ್ನು ಕೂಡಲೇ ಸಂಪರ್ಕಿಸಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಸಾಲದ ಇಎಂಐ ಮರುಪಾವತಿಗೆ ತಾತ್ಕಾಲಿಕ ವಿನಾಯಿತಿ (ಹೋಮ್ ಲೋನ್ ಮೊರಟೋರಿಯಂ) ಕೋರಿ. ಇದನ್ನು ಪಡೆದಾಗ ಒಂದಿಷ್ಟು ಕಾಲ ಸಾಲದ ಕಂತುಗಳನ್ನು ಕಟ್ಟಬೇಕಾಗಿ ಬರುವುದಿಲ್ಲ, ಆದರೆ ನಂತರದ ದಿನಗಳಲ್ಲಿ ಬಡ್ಡಿ ಒಳಗೊಂಡು ಸಾಲ ತೀರಿಸಬೇಕಾಗುತ್ತದೆ. ಇದನ್ನು ಕೊಡಲು ಬ್ಯಾಂಕ್ ಒಪ್ಪದಿದ್ದರೆ ಸಾಲದ ಮರು ಹೊಂದಾಣಿಕೆಗೆ (ಲೋನ್ ರೀಸ್ಟ್ರಕ್ಚರಿಂಗ್) ಮನವಿ ಮಾಡಿ. ಸಾಲದ ಮರು ಹೊಂದಾಣಿಕೆಯಲ್ಲಿ ಸಾಲದ ಅವಧಿಯನ್ನು ಹೆಚ್ಚಿಸಿ ಇಎಂಐ ಮೊತ್ತ ತಗ್ಗಿಸುವ ಅವಕಾಶವಿರುತ್ತದೆ. ಕೆಲವು ಕಾಲ ಸಾಲದ ಬಡ್ಡಿಯ ಮೊತ್ತವನ್ನು ಮಾತ್ರ ಪಾವತಿಸಬಹುದೇ ಎಂದು ಬ್ಯಾಂಕ್ ಅಧಿಕಾರಗಳಲ್ಲಿ ಕೇಳಿನೋಡಿ. ಸಾಮಾನ್ಯವಾಗಿ, ಉತ್ತಮ ರೀತಿಯಲ್ಲಿ ಮರುಪಾವತಿ ಮಾಡುವ ಗ್ರಾಹಕರಿಗೆ ಬ್ಯಾಂಕ್ಗಳು ನೆರವಾಗುತ್ತವೆ.

ಪರ್ಯಾಯ ಆದಾಯ ಹುಡುಕಿ: ಉದ್ಯೋಗ ನಷ್ಟವಾದಾಗ ಮತ್ತೊಂದು ಪೂರ್ಣಾವಧಿ ಉದ್ಯೋಗ ಸಿಗುವವರೆಗೆ ಅರೆಕಾಲಿಕ ಉದ್ಯೋಗ, ಫ್ರೀಲ್ಯಾನ್ಸ್, ಕನ್ಸಲ್ಟಿಂಗ್ನಂತಹ ಆಯ್ಕೆಗಳನ್ನು ಪರಿಗಣಿಸಲು ಮುಂದಾಗಿ.

ಬ್ಯಾಂಕ್ ಜೊತೆ ಮುಚ್ಚುಮರೆ ಬೇಡ: ಸಾಲ ಕೊಟ್ಟಿರುವ ಬ್ಯಾಂಕ್ ಜೊತೆ ಸಮಸ್ಯೆ ಹೇಳಿಕೊಳ್ಳದೆ, ಚರ್ಚೆ ಮಾಡದೆ ಅವರಿಂದ ತಪ್ಪಿಸಿಕೊಳ್ಳಲು ಹೋಗಬೇಡಿ. ಸಾಲದ ಕಂತನ್ನು ಕೆಲ ಕಾಲ ಕಟ್ಟದಿದ್ದಾಗ ಅದು ವಸೂಲಾಗದ ಸಾಲ (ಎನ್ಪಿಎ) ವ್ಯಾಪ್ತಿಗೆ ಬರುತ್ತದೆ. ಈ ರೀತಿ ಎನ್ಪಿಎ ಮಾಡಿಕೊಂಡರೆ ಕ್ರೆಡಿಟ್ ಸ್ಕೋರ್ಗೆ ಹೊಡೆತ ಬೀಳುವ ಜೊತೆಗೆ ಭವಿಷ್ಯದಲ್ಲಿ ಸಾಲ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ಇಪಿಎಫ್, ಪಿಪಿಎಫ್ ಹಣ ತೆಗೆಯಿರಿ: ಸಾಲದ ಕಂತು ಪಾವತಿಸುವ ಸಲುವಾಗಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಣ ನಗದೀಕರಣ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ಆದರೆ ತೀರಾ ಅನಿವಾರ್ಯ ಎಂದಾಗ ಸಾಲದ ಮಾಸಿಕ ಕಂತುಗಳನ್ನು ಕಟ್ಟಲು ಹಣ ಪಡೆದುಕೊಂಡರೆ ತಪ್ಪಿಲ್ಲ. ಇಪಿಎಫ್ನಲ್ಲಿ ಸಾಲ ಮರುಪಾವತಿಯ ಕಾರಣ ನೀಡಿ ಒಂದಷ್ಟು ಹಣವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಇನ್ನು ಪಿಪಿಎಫ್ನಲ್ಲಿ ಹೂಡಿಕೆ ಮಾಡಿದ್ದರೆ 5 ವರ್ಷಗಳ ನಂತರ ಶೇ 50ರಷ್ಟು ಹೂಡಿಕೆ ಮೊತ್ತವನ್ನು ಹಿಂಪಡೆದುಕೊಳ್ಳಬಹುದು. ಇನ್ನು ಮ್ಯೂಚುವಲ್ ಫಂಡ್, ಷೇರು ಹೂಡಿಕೆ ಮಾಡಿದ್ದು ಅದರಲ್ಲಿ ಒಂದಷ್ಟು ಲಾಭವಿದ್ದರೆ ಅದನ್ನು ನಗದೀಕರಣ ಮಾಡಿಕೊಂಡು ಸಾಲದ ಇಎಂಐ ಪಾವತಿಗೆ ಬಳಸಿಕೊಳ್ಳವ ಬಗ್ಗೆ ಚಿಂತಿಸಿ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.