ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಾಹಿತೆಯರಿಗೆ ತಾರತಮ್ಯ ಮಾಡಿಲ್ಲ: ಫಾಕ್ಸ್‌ಕಾನ್‌

Published 27 ಜೂನ್ 2024, 16:38 IST
Last Updated 27 ಜೂನ್ 2024, 16:38 IST
ಅಕ್ಷರ ಗಾತ್ರ

ನವದೆಹಲಿ: ‘ಹೊಸ ನೇಮಕಾತಿಯಲ್ಲಿ ಶೇ 25ರಷ್ಟು ವಿವಾಹಿತೆಯರನ್ನು ನೇಮಿಸಿಕೊಳ್ಳಲಾಗಿದ್ದು, ಯಾವುದೇ ತಾರತಮ್ಯ ಎಸಗಿಲ್ಲ’ ಎಂದು ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ ಸ್ಪಷ್ಟಪಡಿಸಿದೆ.

ತಮಿಳುನಾಡಿನಲ್ಲಿ ಇರುವ ಫಾಕ್ಸ್‌ಕಾನ್‌ ಘಟಕದಲ್ಲಿ ವಿವಾಹಿತೆಯರ ನೇಮಕಾತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಹಿಂದೂ ಮಹಿಳೆಯರು ಮಾಂಗಲ್ಯ ಧರಿಸುವುದರಿಂದ ಸುರಕ್ಷತೆಯ ನೆಪವೊಡ್ಡಿ ಉದ್ಯೋಗ ನೀಡುತ್ತಿಲ್ಲ ಎಂದು ಹೇಳಲಾಗಿತ್ತು. 

ಇದರ ಬೆನ್ನಲ್ಲೇ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಮಿಳುನಾಡಿನ ಕಾರ್ಮಿಕ ಇಲಾಖೆಗೆ ಸೂಚಿಸಿತ್ತು.

‘ತಮಿಳುನಾಡಿನಲ್ಲಿ ಇರುವ ಘಟಕದಲ್ಲಿ ವಿವಾಹಿತೆಯರನ್ನು ನೇಮಿಸಿಕೊಳ್ಳುತ್ತಿಲ್ಲ ಎಂಬ ಆರೋಪ ನಿರಾಧಾರವಾದುದು. ಒಟ್ಟು ಉದ್ಯೋಗಿಗಳ ಪೈಕಿ ಶೇ 70ರಷ್ಟು ಮಹಿಳೆಯರು ಇದ್ದಾರೆಂದು ಕೇಂದ್ರ ಸರ್ಕಾರಕ್ಕೆ ಫಾಕ್ಸ್‌ಕಾನ್‌ ವರದಿ ಸಲ್ಲಿಸಿದೆ’ ಎಂದು ಮೂಲಗಳು ತಿಳಿಸಿವೆ.

‘ಐಫೋನ್‌ ತಯಾರಿಕೆಯಲ್ಲಿ ಸುರಕ್ಷತೆಗೆ ಒತ್ತು ನೀಡಬೇಕಿದೆ. ಹಾಗಾಗಿ, ಪುರುಷರು ಹಾಗೂ ಮಹಿಳೆಯರು ಚಿನ್ನಾಭರಣಗಳನ್ನು ಧರಿಸುವಂತಿಲ್ಲ. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವಾಗ ಇವುಗಳನ್ನು ತೆಗೆದಿಟ್ಟು ಕೆಲಸ ಮಾಡಬೇಕಿದೆ. ಹಲವು ಕಂಪನಿಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಸರ್ಕಾರಕ್ಕೂ ಈ ಬಗ್ಗೆ ಮಾಹಿತಿ ಇದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT