ಶನಿವಾರ, ಜುಲೈ 2, 2022
26 °C

ನೆರೆಹೊರೆಯ ದೇಶಗಳಿಂದ 347 ಎಫ್‌ಡಿಐ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ನವದೆಹಲಿ: ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಿಂದ ಒಟ್ಟು 347 ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಸ್ತಾವಗಳು 2020ರ ಏಪ್ರಿಲ್‌ 18ರ ನಂತರ ಬಂದಿವೆ. ಈ ಎಫ್‌ಡಿಐ ಪ್ರಸ್ತಾವಗಳ ಒಟ್ಟು ಮೊತ್ತವು ₹ 75,951 ಕೋಟಿ. ಬಂದ ಪ್ರಸ್ತಾವಗಳ ಪೈಕಿ ಈವರೆಗೆ ಒಟ್ಟು 66 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಸರ್ಕಾರವು ಸಂಸತ್ತಿ ಬುಧವಾರ ನೀಡಿದೆ. ಬಂದ ಪ್ರಸ್ತಾವಗಳ ಪೈಕಿ 193 ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ ಅಥವಾ ಮುಕ್ತಾಯಗೊಳಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಸೋಮಪ್ರಕಾಶ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದ ಕಂಪನಿಗಳನ್ನು, ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳ ಕಂಪನಿಗಳು ಅವಕಾಶವಾದಿ ಧೋರಣೆಯಲ್ಲಿ ಸ್ವಾಧೀನ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂತಹ ದೇಶಗಳಿಂದ ಬರುವ ಹೂಡಿಕೆ ಪ್ರಸ್ತಾವಗಳಿಗೆ ಅನುಮತಿ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ.

ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ, ನೇಪಾಳ, ಮ್ಯಾನ್‌ಮಾರ್ ಮತ್ತು ಆಫ್ಗಾನಿಸ್ತಾನ ಭಾರತದ ಜೊತೆ ಗಡಿ ಹಂಚಿಕೊಂಡಿವೆ. ಈ ದೇಶಗಳಿಂದ ಭಾರತದ ಯಾವುದೇ ವಲಯಕ್ಕೆ ಬರುವ ಎಫ್‌ಡಿಐ ಪ್ರಸ್ತಾವಗಳು ಕೇಂದ್ರದ ಅನುಮತಿ ಪಡೆದುಕೊಳ್ಳಬೇಕು. ಸರ್ಕಾರವು ಅನುಮತಿ ನೀಡಿರುವ 66 ಪ್ರಸ್ತಾವಗಳ ಒಟ್ಟು ಮೌಲ್ಯ ₹ 13,624 ಕೋಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು