ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಪೇ ಬಳಸುತ್ತಿವೆ 50 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು

Last Updated 23 ಏಪ್ರಿಲ್ 2021, 12:39 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಅಮೆಜಾನ್ ಪೇ ಇಂದು ತನ್ನ ಡಿಜಿಟಲ್ ಪಾವತಿ ಮೂಲಸೌಕರ್ಯದೊಂದಿಗೆ 50 ಲಕ್ಷಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ತಲುಪಿದ್ದು, ಬೆಂಗಳೂರಿನಲ್ಲೇ ಸುಮಾರು 3 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಈಗ ಅಮೆಜಾನ್ ಪೇ ಅನ್ನು ಬಳಸುತ್ತಿವೆ. ಈ ಹಿಂದೆ ಹೆಚ್ಚಿನವರು ನಗದು ರೂಪದಲ್ಲಿ ಮಾತ್ರ ವಹಿವಾಟು ನಡೆಸುತ್ತಿದ್ದರು, ಈಗ ಅಮೆಜಾನ್ ಪೇನ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಪಾವತಿ ಮಾಡಿಸಿಕೊಳ್ಳುತ್ತಿವೆ.

ಅಮೆಜಾನ್‌ನ ಹಿರಿಯ ಉಪಾಧ್ಯಕ್ಷ ರಸ್ಸೆಲ್ ಗ್ರ್ಯಾಂಡಿನೆಟ್ಟಿ ಅವರು ಅಮೆಜಾನ್ ಸಂಭವ್‌ನಲ್ಲಿ ನಡೆದ ‘ಉತ್ತಮ ಭಾರತಕ್ಕಾಗಿ ಹೊಸತನ’ ಅಧಿವೇಶನದಲ್ಲಿ ನಂದನ್ ನಿಲೇಕಣಿ ಅವರೊಂದಿಗಿನ ಸಂಭಾಷಣೆಯಲ್ಲಿ ಬಹಿರಂಗಪಡಿಸಿದ್ದಾರೆ.

ಎಸ್‌ಎಮ್‌ಬಿಗಳಿಗಾಗಿ ಡಿಜಿಟಲ್ ಪಾವತಿ ಸ್ವೀಕರಿಸುವುದನ್ನು ಸರಳೀಕರಿಸಲು ಅಮೆಜಾನ್ ಪೇ 'ಅಮೆಜಾನ್ ಪೇ ಫಾರ್ ಬ್ಯುಸಿನೆಸ್' ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ದೇಶದಾದ್ಯಂತ ವ್ಯವಹಾರಗಳು ತಮ್ಮನ್ನು ನೋಂದಾಯಿಸಿಕೊಳ್ಳಲು, ಕ್ಯೂಆರ್ ಕೋಡ್ ಅನ್ನು ರಚಿಸಲು ಪ್ರಾರಂಭಿಸಬಹುದು. ಈ ವ್ಯವಹಾರಗಳಿಗೆ ಪಾವತಿ ಮಾಡಲು ಗ್ರಾಹಕರು ಯಾವುದೇ ಯುಪಿಐ ಅಪ್ಲಿಕೇಶನ್ ಅನ್ನು ಬಳಸಬಹುದು.

ಅಮೆಜಾನ್ ಪೇ ಇಂಡಿಯಾದ ಸಿಇಒ ಮಹೇಂದ್ರ ನೆರೂರ್ಕರ್, 'ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಮ್ಮ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬು. 50 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುವ ಮೂಲಕ, ನಾವು ಅವರನ್ನು ಡಿಜಿಟಲ್ ಇಂಡಿಯಾಕ್ಕೆ ಸೇರ್ಪಡೆಗೊಳಿಸುವುದನ್ನು ಚುರುಕುಗೊಳಿಸುತ್ತಿದ್ದೇವೆ. ಇದೀಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT