ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಆರ್‌ಟಿ ಜುವೆಲರ್ಸ್‌ಗೆ ಪ್ರತಿಷ್ಠಿತ ಪ್ರಶಸ್ತಿ

Published 4 ಸೆಪ್ಟೆಂಬರ್ 2023, 16:32 IST
Last Updated 4 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ಬೆಂಗಳೂರು: ಗಿಲ್ಡ್‌ ಇಂಡಿಯಾ ಸಂಸ್ಥೆಯು ಆಯೋಜಿಸಿದ್ದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಆರ್‌ಟಿ ಜುವೆಲರ್ಸ್ ಕಂಪನಿಯು ದಕ್ಷಿಣ ಭಾರತದ ‘ಬೆಸ್ಟ್‌ ಚೈನ್‌ ಸ್ಟೋರ್ಸ್‌ ಪ್ಲಾಟಿನಂ’ ಪ್ರಶಸ್ತಿ ಮತ್ತು ದೇಶದ ‘ಬೆಸ್ಟ್‌ ಚೈನ್‌ ಸ್ಟೋರ್ಸ್‌ ಪ್ಲಾಟಿನಂ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸತತ ಏಳನೇ ಬಾರಿಗೆ ಈ ಪ್ರಶಸ್ತಿ ದೊರೆತಿದೆ. ಪ್ಲಾಟಿನಂ ಮತ್ತು ಇತರ ಚಿನ್ನಾಭರಣಗಳ ವಿನ್ಯಾಸ, ಶ್ರೇಣಿ ಮತ್ತು ಗ್ರಾಹಕರನ್ನು ಸಂತೋಷಪಡಿಸುವಲ್ಲಿ ಕಂಪನಿಯು ನೀಡಿರುವ ಆದ್ಯತೆಯನ್ನು ಇದು ಸೂಚಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಹಲವು ವರ್ಷಗಳಿಂದ ಶುದ್ಧತೆ, ನಂಬಿಕೆ ಮತ್ತು ದೋಷರಹಿತ ಕಸುಬುದಾರಿಕೆಯ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಪಟ್ಟಿರುವ ಶ್ರಮದ ಫಲತಾಂಶವನ್ನು ಇಂದು ಅನುಭವಿಸುತ್ತಿದ್ದೇವೆ’ ಎಂದು ಜಿಆರ್‌ಟಿ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್‌. ‘ಆನಂದ್‌’ ಅನಂತಪದ್ಮನಾಭನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT