ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ, ತಮ್ಮಲ್ಲಿ ಲಭ್ಯವಿರುವ ತೈಲದ ವಿವರ ನೀಡುವಂತೆ ದೇಶದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೂಚಿಸಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ಇಂಧನ ಲಭ್ಯತೆಯ ಸ್ಥಿತಿಯನ್ನು ತಿಳಿದುಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಯಾನ ಸಚಿವಾಲಯದ ನಿರ್ದೇಶನದಂತೆ ಎಎಐ ಈ ವಿವರ ಕೇಳಿದೆ ಎಂದು ಮೂಲವೊಂದು ತಿಳಿಸಿದೆ.

ದಿನಕ್ಕೆ ಸರಾಸರಿ ಇಂಧನ ಬಳಕೆ, ಮುಂದಿನ ಏಳು ದಿನಗಳಿಗೆ ಬೇಕಾಗುವ ಅಂದಾಜು ತೈಲದ ಅಗತ್ಯ ಮತ್ತು ಮುಂದಿನ ಇಂಧನ ಪುನರ್ಭರ್ತಿಯ ವೇಳೆಯನ್ನು ತಿಳಿಸುವಂತೆ ವಿಮಾನ ನಿಲ್ದಾಣದ ನಿರ್ವಾಹಕರನ್ನು ಕೇಳಿದೆ ಎಂದು ತಿಳಿಸಿವೆ.

ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ದೇಶದಲ್ಲಿ 33 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.

ಕಚ್ಚಾ ತೈಲ ದರ ಏರಿಕೆ

ಲಂಡನ್: ಬ್ರೆಂಟ್ ಕಚ್ಚಾ ತೈಲ ದರವು ಮಂಗಳವಾರದ ವಹಿವಾಟಿನಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರಲ್ ದರವು 85.12 ಡಾಲರ್ಗೆ ತಲುಪಿದೆ. ಇದು 2024ರ ಜುಲೈ ಬಳಿಕ ದಾಖಲಾದ ಗರಿಷ್ಠ ಏರಿಕೆ ಆಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ದರವು ಶೇ 7ರಷ್ಟು ಹೆಚ್ಚಾಗಿ, ಪ್ರತೀ ಬ್ಯಾರಲ್ 76.47 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.