ಮುಂಬೈ: ವಿದೇಶಿ ಹೂಡಿಕೆಗಳಿಗೆ ತೆರೆದುಕೊಂಡಿರುವ ರಿಲಯನ್ಸ್ ಜಿಯೊ, ಆರು ವಾರಗಳಲ್ಲಿ ಆರನೇ ಒಪ್ಪಂದಕ್ಕೆ ಮುಂದಾಗಿದೆ. ಅಬು–ಧಾಬಿ ಮೂಲದ ಮುಬದಲಾ ಹೂಡಿಕೆ ಸಂಸ್ಥೆ ಜಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ₹9,093.60 ಕೋಟಿ ಹೂಡಿಕೆ ಮಾಡಲಿದೆ.

ಮುಬದಲಾ ಹೂಡಿಕೆಯ ಮೂಲಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಶೇ 1.85ರಷ್ಟು ಷೇರು ಹೊಂದಲಿದೆ. ಈ ವಹಿವಾಟು ಜಿಯೊ ಪ್ಲಾಟ್‌ಫಾರ್ಮ್‌ನ ಈಕ್ವಿಟಿ ಮೌಲ್ಯವು ₹4.91 ಲಕ್ಷ ಕೋಟಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು ₹5.16 ಲಕ್ಷ ಕೋಟಿಗೆ ಕೊಂಡೊಯ್ಯಲಿದೆ.

ಮುಬದಲಾ ಹೂಡಿಕೆಯಿಂದಾಗಿ ಜಿಯೊ ಪ್ಲಾಟ್‌ಫಾರ್ಮ್ಸ್ ಒಟ್ಟು ₹87,655.35 ಕೋಟಿ ಸಂಗ್ರಹಿಸಿದಂತಾಗಲಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ಮತ್ತೆ ₹10 ಲಕ್ಷ ಕೋಟಿ ಮಟ್ಟ ತಲುಪಿದಂತಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಡಿಜಿಟಲ್ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಈಗಾಗಲೇ ಫೇಸ್‌ಬುಕ್, ಸಿಲ್ವರ್ ಲೇಕ್ ಮತ್ತು ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್ ಹೂಡಿಕೆ ಸಂಸ್ಥೆ ಪಾಲು ಖರೀದಿ ಒಪ್ಪಂದ ಮಾಡಿಕೊಂಡಿವೆ.

ಇದರೊಂದಿಗೆ ರಿಲಯನ್ಸ್ ₹53,125 ಕೋಟಿ ಮೌಲ್ಯದ ಹಕ್ಕಿನ ಷೇರುಗಳ ವಿತರಣೆ ನಡೆಸಿ ಹಣ ಸಂಗ್ರಹಿಸುತ್ತಿದೆ. 2021ರ ಮಾರ್ಚ್ ವೇಳೆಗೆ ಸಾಲ ಮುಕ್ತವಾಗಲು ರಿಲಯನ್ಸ್ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.