ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ವೆಚ್ಚ ಹೆಚ್ಚಳ: ಗ್ರೂಪ್‌ಎಂ ಅಂದಾಜು

Last Updated 14 ಫೆಬ್ರವರಿ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತು ವೆಚ್ಚಗಳಿಗೆ ಸಂಬಂಧಿಸಿದ ವರದಿಯನ್ನು ಮಾರಾಟ ಸೇವಾ ಕಂಪನಿ ‘ಗ್ರೂಪ್‌ಎಂ’ ಮಂಗಳವಾರ ಬಿಡುಗಡೆ ಮಾಡಿದ್ದು, 2023ರಲ್ಲಿ ದೇಶದಲ್ಲಿ ಕಂಪನಿಗಳು ಜಾಹೀರಾತುಗಳ ಮೇಲೆ ಮಾಡುವ ವೆಚ್ಚ ಹೆಚ್ಚಾಗಲಿದೆ ಎಂದು ಅಂದಾಜಿಸಿದೆ.

2022ಕ್ಕೆ ಹೋಲಿಸಿದರೆ 2023ರಲ್ಲಿ ₹ 20 ಸಾವಿರ ಕೋಟಿಯಷ್ಟು ಹೆಚ್ಚು ವೆಚ್ಚ ಆಗಲಿದೆ. ಇದು ದೇಶದ ಜಾಹೀರಾತು ಉದ್ಯಮದ ನಿರಂತರ ಬೆಳವಣಿಗೆಯನ್ನು ತೋರಿಸುತ್ತದೆ. ಜಾಹೀರಾತುಗಳ ಮೇಲಿನ ವೆಚ್ಚವು ಶೇ 15.5ರಷ್ಟು ಹೆಚ್ಚಾಗಿ, ₹ 1.46 ಲಕ್ಷ ಕೋಟಿಗೆ ತಲುಪಲಿದೆ ಎಂದು ಅದು ಹೇಳಿದೆ.

‘ಗ್ರಾಹಕರು, ಬ್ರ್ಯಾಂಡ್‌ಗಳು ಹಾಗೂ ಉದ್ದಿಮೆಗಳು ಪರಸ್ಪರ ಸಂವಹನ ನಡೆಸುವ ಬಗೆಯನ್ನು ತಂತ್ರಜ್ಞಾನವು ಬದಲಾಯಿಸುತ್ತಿದೆ. ಜಾಹೀರಾತು ಉದ್ಯಮವು ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಂಡು ಸಾಗಬೇಕು’ ಎಂದು ‘ಗ್ರೂಪ್‌ಎಂ’ನ ದಕ್ಷಿಣ ಏಷ್ಯಾ ಸಿಇಒ ಪ್ರಶಾಂತ್ ಕುಮಾರ್ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT