ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹದ ವಿರುದ್ಧ ತನಿಖೆ; 15 ದಿನ ಅವಧಿ ವಿಸ್ತರಣೆ ಕೇಳಿದ ಸೆಬಿ

Published 14 ಆಗಸ್ಟ್ 2023, 13:27 IST
Last Updated 14 ಆಗಸ್ಟ್ 2023, 13:27 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹವು ಷೇರುಗಳ ಮೌಲ್ಯವನ್ನು ಏರಿಳಿತ ಮಾಡಿದೆ ಎಂಬ ಅರೋಪ ಕುರಿತು ತನಿಖೆ ಪೂರ್ಣಗೊಳಿಸಲು 15 ದಿನ ಅವಧಿ ವಿಸ್ತರಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 24 ವಿಷಯಗಳ ಪರಿಶೀಲನೆ ಹಾಗೂ ತನಿಖೆ ನಡೆಸಲಾಗಿದೆ ಎಂದು ಸೆಬಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ಪರಿಶೀಲನೆ ಹಾಗೂ ತನಿಖೆ ನಡೆಸಲಾಗಿರುವ 24 ವಿಷಯಗಳ ಪೈಕಿ 17 ವಿಷಯಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆಬಿ ನಿಯಮಗಳ ಅನುಸಾರ ಸಕ್ಷಮ ಪ್ರಾಧಿಕಾರವು ಇದಕ್ಕೆ ಅನುಮೋದನೆ ನೀಡಿದೆ ಎಂದು ವಿವರಿಸಿದೆ.

‘ಪ್ರಕರಣದ ಸಂಬಂಧ ವಿದೇಶಗಳಲ್ಲಿನ ಸಂಸ್ಥೆಗಳು, ನಿಯಂತ್ರಣ ಪ್ರಾಧಿಕಾರಗಳಿಂದಲೂ ಮಾಹಿತಿಯನ್ನು ಕೋರಲಾಗಿದೆ. ಮಾಹಿತಿಯು ತಲುಪುತ್ತಿದ್ದಂತೆ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು. ನಾಲ್ಕು ವಿಷಯಗಳಿಗೆ ಸಂಬಂಧಿಸಿದಂತೆ ಸೆಬಿ ಪರಿಣತರು ಶೀಘ್ರವೇ ತನಿಖೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಮುಂದಿನ ವಿಚಾರಣೆ ನಡೆಯುವ ಆ. 29ರೊಳಗೆ ಪ್ರಕ್ರಿಯೆ ಬಹುತೇಕ ಮುಗಿಯಲಿದೆ’ ಎಂದು ತಿಳಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT