ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಮುಗ್ಗಟ್ಟು: ಶ್ರೀಲಂಕಾದಲ್ಲಿ ಸುಧಾರಣೆ; ಪಾಕಿಸ್ತಾನದಲ್ಲಿ ಅಸ್ಥಿರತೆ

Published 12 ಏಪ್ರಿಲ್ 2024, 13:44 IST
Last Updated 12 ಏಪ್ರಿಲ್ 2024, 13:44 IST
ಅಕ್ಷರ ಗಾತ್ರ

ಕೊಲಂಬೊ/ ಇಸ್ಲಾಮಾಬಾದ್: ‘ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಶೀಲಂಕಾದಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿಯು ಸುಧಾರಣೆಯ ಹಾದಿಯಲ್ಲಿದ್ದು, 2024ರಲ್ಲಿ ಇದು ಶೇ 1.9ರ ದರದಲ್ಲಿ ವೃದ್ಧಿ ಕಾಣುತ್ತಿದೆ. 2025ರಲ್ಲಿ ಇದು ಶೇ 2.5ಕ್ಕೆ ಏರಿಕೆಯಾಗಲಿದೆ’ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಹೇಳಿದೆ.

‘ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೊಸ ನೀತಿಗಳ ರೂಪಣೆ, ಗ್ರಾಹಕರ ಮತ್ತು ವ್ಯಾವಹಾರಿಕ ಕ್ಷೇತ್ರಗಳಲ್ಲಿ ಉತ್ತಮಗೊಂಡ ಬಾಂಧವ್ಯ, ಹೊರದೇಶಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಯಂತ ಕ್ರಮಗಳಿಂದ ಶ್ರೀಲಂಕಾದ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬಂದಿದೆ. 2023ರ ಮಧ್ಯದಿಂದಲೇ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯತ್ತ ಸಾಗಲಾರಂಭಿಸಿತು’ ಎಂದಿದೆ.

ಮತ್ತೊಂದೆಡೆ, ಇದೇ ಪರಿಸ್ಥಿತಿ ಎದುರಿಸುತ್ತಿದ್ದ ಪಾಕಿಸ್ತಾನದಲ್ಲಿ ಈಗಲೂ ಆರ್ಥಿಕ ಪರಿಸ್ಥಿತಿ ಅನಿಶ್ಚಿತತೆಯಿಂದಲೇ ಕೂಡಿದೆ. ರಾಜಕೀಯ ಅಸ್ಥಿರತೆ, ಸುಸ್ಥಿರ ಆರ್ಥಿಕತೆಗೆ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಸಮಸ್ಯೆಗಳೇ ಪ್ರಮುಖ ಕಾರಣಗಳು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮನಿಲಾ ಮೂಲದ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ವರದಿಯ ಪ್ರಕಾರ, ‘ಪೂರಕ ಸರಪಳಿ ತುಂಡಾಗಿದೆ. ಮಧ್ಯಪ್ರಾಚ್ಯದಲ್ಲಿ ಸಂದಿಗ್ಧತೆಯು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಗೆ ಕಾರಣವಾಗಿದೆ. ಕೆಲವೊಂದು ಸುಧಾರಣೆಗಳನ್ನು ದೇಶ ಕೈಗೊಂಡಿದೆ. ಆದರೆ ಇದು ಫಲ ನೀಡಲು ಹಲವು ಸಮಯದ ಅಗತ್ಯ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT