ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ವಾರಗಳಲ್ಲಿ 24ನೇ ಬಾರಿಗೆ ತೈಲ ದರ ಏರಿಕೆ: ಹಲವೆಡೆ ಲೀಟರ್‌ ಪೆಟ್ರೋಲ್‌ಗೆ ₹100

Last Updated 14 ಜೂನ್ 2021, 14:19 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಪೆಟ್ರೋಲ್‌ ದರವನ್ನು ಲೀಟರಿಗೆ 29 ಪೈಸೆ, ಡೀಸೆಲ್‌ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ. ಇದರಿಂದಾಗಿ ಹೈದರಾಬಾದ್‌ನಲ್ಲಿಯೂ ಪೆಟ್ರೋಲ್‌ ದರ ಲೀಟರಿಗೆ ₹ 100ರ ಗಡಿ ದಾಟಿದೆ.

ಹೈದರಾಬಾದ್‌ನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 100.20 ಮತ್ತು ಡೀಸೆಲ್‌ ದರ ₹ 95.14ಕ್ಕೆ ತಲುಪಿದೆ. ಆರು ವಾರಗಳಲ್ಲಿ 24ನೇ ಬಾರಿಗೆ ಇಂಧನ ದರ ಹೆಚ್ಚಿಸಲಾಗಿದೆ.

ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹಲವು ಕಡೆಗಳಲ್ಲಿ ಪೆಟ್ರೋಲ್‌ ದರ ಈಗಾಗಲೇ ₹ 100ರ ಗಡಿ ದಾಟಿದೆ.

ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್‌ ದರ ಲೀಟರಿಗೆ ₹ 99.69 ಮತ್ತು ಡೀಸೆಲ್‌ ಲೀಟರಿಗೆ ₹ 92.58ರಷ್ಟಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ₹ 96.41 ಮತ್ತು ಡೀಸೆಲ್‌ ದರ ₹ 87.28ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT