ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ನೇಮಕಕ್ಕೆ ಒತ್ತಾಯ; ಡಿಸೆಂಬರ್‌4 ರಿಂದ ಮುಷ್ಕರಕ್ಕೆ ಕರೆ ನೀಡಿದ ಎಐಬಿಇಎ

Published 30 ಸೆಪ್ಟೆಂಬರ್ 2023, 16:24 IST
Last Updated 30 ಸೆಪ್ಟೆಂಬರ್ 2023, 16:24 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಅಗತ್ಯ ಇರುವಷ್ಟು ಸಿಬ್ಬಂದಿ ನೇಮಕ ಮಾಡುವಂತೆ ಒತ್ತಾಯಿಸಲು ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು (ಎಐಬಿಇಎ) ಡಿಸೆಂಬರ್ 4ರಿಂದ 2024ರ ಜನವರಿ 20ರವರೆಗೆ ಹಲವು ಹಂತಗಳಲ್ಲಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.

ಈ ಮುಷ್ಕರಗಳಿಂದಾಗಿ ಬ್ಯಾಂಕಿಂಗ್‌ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಂಘವು ತಿಳಿಸಿದೆ.

ಕ್ಲರಿಕಲ್‌ ಸಿಬ್ಬಂದಿಯ ನೇಮಕಾತಿಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಸಬ್‌–ಸ್ಟಾಫ್‌ ಮತ್ತು ಸ್ವಚ್ಛತಾ ಸಿಬ್ಬಂದಿ ನೇಮಕಕ್ಕೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಸಂಘವು ವಿರೋಧ ವ್ಯಕ್ತಪಡಿಸಿದೆ.

ಮುಷ್ಕರದ ವಿವರ

ಡಿಸೆಂಬರ್‌ 4; ಪಂಜಾಬ್‌ ನ್ಯಾಷನಲ್ ಬ್ಯಾಂಕ್‌, ಪಂಜಾಬ್‌ ಆ್ಯಂಡ್‌ ಸಿಂಧ್, ಎಸ್‌ಬಿಐ

ಡಿಸೆಂಬರ್‌ 5; ಬ್ಯಾಂಕ್ ಆಫ್‌ ಬರೋಡ, ಬ್ಯಾಂಕ್‌ ಆಫ್ ಇಂಡಿಯಾ

ಡಿಸೆಂಬರ್ 6; ಕೆನರಾ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

ಡಿಸೆಂಬರ್‌ 7; ಇಂಡಿಯನ್ ಬ್ಯಾಂಕ್‌, ಯೂಕೊ ಬ್ಯಾಂಕ್‌

ಡಿಸೆಂಬರ್‌ 8; ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಕ್‌ ಆಫ್ ಮಹಾರಾಷ್ಟ್ರ

ಡಿಸೆಂಬರ್‌ 11; ಎಲ್ಲ ಖಾಸಗಿ ಬ್ಯಾಂಕ್‌ಗಳಲ್ಲಿ

2024 ಜನವರಿ 2; ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ‍ಪುದುಚೆರಿ, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ

ಜನವರಿ 3; ಗುಜರಾತ್‌, ಮಹಾರಾಷ್ಟ್ರ, ಗೋವಾ, ದಾದರ್‌, ಡಿಯು–ದಾಮನ್‌

ಜನವರಿ 4; ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸಗಢ

ಜನವರಿ 5; ದೆಹಲಿ, ಪಂಜಾಬ್‌, ಹರಿಯಾಣ, ಜಮ್ಮು–ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ

ಜನವರಿ 6; ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ, ಅಸ್ಸಾಂ, ತ್ರಿಪುರಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್‌, ಮಿಜೋರಾಂ, ಅರುಣಾಚಲ ಪ್ರದೇಶ, ಸಿಕ್ಕಿಂ

ಜನವರಿ 19 ಮತ್ತು 20; ಎಲ್ಲ ಬ್ಯಾಂಕ್‌ಗಳಲ್ಲಿ ಎರಡು ದಿನ ಅಖಿಲ ಭಾರತ ಮುಷ್ಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT