ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ಯುಕೆ ಮಧ್ಯೆ 20 ಹೆಚ್ಚುವರಿ ವಿಮಾನ ಸೇವೆ: ಏರ್‌ ಇಂಡಿಯಾ

Last Updated 1 ಅಕ್ಟೋಬರ್ 2022, 19:05 IST
ಅಕ್ಷರ ಗಾತ್ರ

ಬೆಂಗಳೂರು: ಏರ್‌ ಇಂಡಿಯಾ ವಿಮಾನಯಾನ ಕಂಪನಿಯು ಬರ್ಮಿಂಗ್‌ಹ್ಯಾಮ್‌, ಲಂಡನ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊಗೆ ಪ್ರತಿ ವಾರವೂಹೆಚ್ಚುವರಿಯಾಗಿ 20 ವಿಮಾನಗಳ ಸಂಚಾರದ ಆರಂಭವನ್ನು ಘೋಷಿಸಿದೆ.

ಇದೇ ಅಕ್ಟೋಬರ್‌ನಿಂದ ನವೆಂಬರ್‌ ಅವಧಿಯಲ್ಲಿ ಹಂತ ಹಂತವಾಗಿ ವಿಮಾನ ಸಂಚಾರ ಆರಂಭಿಸುವುದಾಗಿ ಅದು ತಿಳಿಸಿದೆ. ತನ್ನ ಅಂತರರಾಷ್ಟ್ರೀಯ ಸೇವೆಯನ್ನು ಇನ್ನಷ್ಟು ಬಲಪಡಿಸಲು ಈ ಕ್ರಮ ಕೈಗೊಂಡಿದೆ.

ಬರ್ಮಿಂಗ್‌ಹ್ಯಾಮ್‌ಗೆ 5, ಲಂಡನ್‌ಗೆ 9 ಮತ್ತು ಸ್ಯಾನ್‌ ಫ್ರಾನ್ಸಿಸ್ಕೊಗೆ 6 ಹೆಚ್ಚುವರಿ ವಿಮಾನಗಳು ಸಂಚಾರ ನಡೆಸಲಿದ್ದು, ಪ್ರತಿ ವಾರವೂ ಗ್ರಾಹಕರಿಗೆ 5 ಸಾವಿರ ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದರಿಂದಾಗಿ ಪ್ರತಿ ವಾರ ಯುಕೆಗೆ ಪ್ರಯಾಣಿಸಲಿರುವ ಏರ್‌ ಇಂಡಿಯಾದ ವಿಮಾನಗಳ ಸಂಖ್ಯೆಯು 34 ರಿಂದ 48ಕ್ಕೆ ಏರಿಕೆ ಆಗಲಿದೆ. ಅಮೆರಿಕಕ್ಕೆ ಸಂಚರಿಸಲಿರುವ ಏರ್‌ ಇಂಡಿಯಾದ ವಿಮಾನಗಳ ಸಂಖ್ಯೆಯು 34 ರಿಂದ 40ಕ್ಕೆ ಏರಿಕೆ ಆಗಲಿದೆ.

ಕಂಪನಿಯ ‘ವಿಹಾನ್‌.ಎಐ’ (Vihaan.AI) ಕಾರ್ಯಯೋಜನೆಯ ಭಾಗವಾಗಿ, ಭಾರತದ ಪ್ರಮುಖ ನಗರಗಳಿಂದ ಹೆಚ್ಚಿನ ಅಂತರರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಲು ಗಮನ ಹರಿಸಲಾಗುವುದು ಎಂದು ಕಂಪನಿಯ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT