ಶುಕ್ರವಾರ, ಜನವರಿ 27, 2023
21 °C

ಏರ್ ಇಂಡಿಯಾ: ಬೆಂಗಳೂರು – ಸ್ಯಾನ್‌ಫ್ರಾನ್ಸಿಸ್ಕೊ ವಿಮಾನಯಾನ ಮತ್ತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಸಮೂಹದ ಒಡೆತನಕ್ಕೆ ಸೇರಿರುವ ಏರ್ ಇಂಡಿಯಾ ವಿಮಾನಯಾನ ಕಂಪನಿಯು ಬೆಂಗಳೂರಿನಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರಕ್ಕೆ ನೇರ ವಿಮಾನ ಸಂಚಾರವನ್ನು ಶುಕ್ರವಾರದಿಂದ ಮತ್ತೆ ಆರಂಭಿಸಿದೆ.

ವಾರದಲ್ಲಿ ಮೂರು ದಿನ (ಶುಕ್ರವಾರ, ಭಾನುವಾರ ಮತ್ತು ಬುಧವಾರ) ಈ ವಿಮಾನ ಸಂಚಾರ ಇರಲಿದೆ. ಬೆಂಗಳೂರು ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ನಡುವಿನ ಅಂತರ ವಾಯುಮಾರ್ಗದಲ್ಲಿ ಅಂದಾಜು 13,993 ಕಿ.ಮೀ. ಈ ಮಾರ್ಗದಲ್ಲಿ ವಿಮಾನ ಸಂಚಾರದ ಒಟ್ಟು ಅವಧಿ 17 ಗಂಟೆಗಿಂತ ಹೆಚ್ಚಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು