ಶುಕ್ರವಾರ, ಜುಲೈ 1, 2022
22 °C
ನ.26ರಿಂದ ಅನ್ವಯ

ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ: ಇಲ್ಲಿದೆ ಪರಿಷ್ಕೃತ ದರ ವಿವರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕಗಳಲ್ಲಿ ಶೇ 20–25ರಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಖಾಸಗಿ ದೂರಸಂಪರ್ಕ ಸಂಸ್ಥೆ ಭಾರ್ತಿ ಏರ್‌ಟೆಲ್‌ ಸೋಮವಾರ ಘೋಷಿಸಿದೆ.

ವಾಯ್ಸ್ ಕರೆ, ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ನ ವಿವಿಧ ಪ್ಲಾನ್‌ಗಳ ದರ ಹೆಚ್ಚಿಸಲಾಗಿದ್ದು, ನವೆಂಬರ್ 26ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಎಂಟ್ರಿ ಲೆವೆಲ್ ವಾಯ್ಸ್ ಕರೆ ಪ್ಲಾನ್‌ನ ಶುಲ್ಕವನ್ನು ಶೇ 25ರಷ್ಟು ಹೆಚ್ಚಿಸಲಾಗಿದೆ. ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ ಶುಲ್ಕದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಲಾಗಿದೆ.

ಓದಿ: 

ಆರ್ಥಿಕವಾಗಿ ಆರೋಗ್ಯಕರ ಉದ್ಯಮದ ಮಾದರಿಯನ್ನು ಅನುಸರಿಸಲು ಹಾಗೂ ಬಂಡವಾಳಕ್ಕೆ ತಕ್ಕ ಲಾಭಕ್ಕಾಗಿ ಪ್ರತಿ ಬಳಕೆದಾರನಿಂದ ₹200 ಹಾಗೂ ಗರಿಷ್ಠ ₹300 ಸರಾಸರಿ ಆದಾಯ (ಎಪಿಆರ್‌ಪಿಯು) ಬರುವಂತೆ ಏರ್‌ಟೆಲ್ ನೋಡಿಕೊಳ್ಳುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ಮಟ್ಟದ ಎಪಿಆರ್‌ಪಿಯು ಅಂತರ್ಜಾಲ ಮತ್ತು ಸ್ಪೆಕ್ಟ್ರಂ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಸಕ್ರಿಯಗೊಳಿಸಲಿದೆ ಎಂದು ಭಾವಿಸುವುದಾಗಿಯೂ ಭಾರತದಲ್ಲಿ 5ಜಿ ಸೇವೆ ಒದಗಿಸುವುದಕ್ಕೂ ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಹೀಗಿದೆ ಹೊಸ ದರ...

28 ದಿನಗಳ ವಾಯ್ಸ್ ಕರೆ ಸೌಲಭ್ಯಕ್ಕೆ ಈಗ ₹79 ದರ ಇದ್ದು ಇದನ್ನು ₹99ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ 50ರಷ್ಟು ಹೆಚ್ಚುವರಿ ಟಾಕ್‌ಟೈಮ್, 200 ಎಂಬಿ ಡೇಟಾ ಹಾಗೂ 1p/sec ವಾಯ್ಸ್ ಟಾರಿಫ್‌ ದೊರೆಯಲಿದೆ.

ಕಳೆದ ಜುಲೈಯಲ್ಲಿ ₹49ರ ಪ್ರಿಪೇಯ್ಡ್ ರಿಚಾರ್ಜ್‌ ಪ್ಲಾನ್‌ ಅನ್ನು ಏರ್‌ಟೆಲ್ ರದ್ದುಗೊಳಿಸಿತ್ತು.

ಓದಿ: 

ಅನ್‌ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯ ವಿಭಾಗದಲ್ಲಿ ಈಗಿರುವ ₹149ರ ಯೋಜನೆಯನ್ನು ಪರಿಷ್ಕರಿಸಿ ದರವನ್ನು ₹179ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕರೆ, ನೂರು ಎಸ್‌ಎಂಸ್, 2 ಜಿಬಿ ಡೇಟಾ ದೊರೆಯಲಿದೆ. ₹2,498ರ ಯೋಜನೆಯನ್ನು ಪರಿಷ್ಕರಿಸಿ ₹2,999 ದರ ನಿಗದಿಪಡಿಸಲಾಗಿದೆ. ಈ ಯೋಜನೆಯ ಅವಧಿ 365 ದಿನ ಆಗಿರಲಿದ್ದು, ಅನ್‌ಲಿಮಿಟೆಡ್ ವಾಯ್ಸ್ ಕಾಲ್, ಪ್ರತಿ ದಿನ ನೂರು ಎಸ್‌ಎಂಎಸ್ ಹಾಗೂ ಪ್ರತಿ ದಿನ 2 ಜಿಬಿ ಡೇಟಾ ಇರಲಿದೆ.

ಡೇಟಾ ಟಾಪ್‌–ಅಪ್‌ ಯೋಜನೆಗಳಲ್ಲಿ ಈಗಿರುವ ₹48ರ 3 ಜಿಬಿ ಡೇಟಾ ಯೋಜನೆಗೆ ₹58 ನಿಗದಿಪಡಿಸಲಾಗಿದೆ. 12 ಜಿಬಿ ಡೇಟಾ ಯೋಜನೆಯ ದರವನ್ನು ₹98ರ ಬದಲು ₹118ಕ್ಕೆ ಹೆಚ್ಚಿಸಲಾಗಿದೆ. 50 ಜಿಬಿ ಡೇಟಾ ಯೋಜನೆಯ ದರವನ್ನು ₹251ಕ್ಕೆ ಬದಲಾಗಿ ₹301ಕ್ಕೆ ಹೆಚ್ಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು