ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಬಿಲ್‌ನಲ್ಲಿ ಮೂರು ಸೇವೆ: ಏರ್‌ಟೆಲ್‌ ಬ್ಲ್ಯಾಕ್‌ಗೆ ಚಾಲನೆ

Last Updated 2 ಜುಲೈ 2021, 11:08 IST
ಅಕ್ಷರ ಗಾತ್ರ

ಬೆಂಗಳೂರು: ದೂರಸಂಪರ್ಕ ಸೇವಾ ವಲಯದ ಪ್ರಮುಖ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್‌, ‘ಏರ್‌ಟೆಲ್‌ ಬ್ಲ್ಯಾಕ್‌’ ಹೆಸರಿನಲ್ಲಿ ಹೊಸ ಯೋಜನೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಒಂದೇ ಬಿಲ್ ಪಾವತಿಸಿ ಡಿಟಿಎಚ್‌ ಸಂಪರ್ಕ, ಮೊಬೈಲ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.

‘ಈಗಿನ ಸಂದರ್ಭದಲ್ಲಿ ಹಲವರಿಗೆ ಮನೆಗಳೇ ಕಚೇರಿಗಳೂ ಆಗಿವೆ. ಅವರಿಗೆ ಮನೆಯಲ್ಲಿ ಒಳ್ಳೆಯ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕದ ಅಗತ್ಯ ಇದೆ. ಮನರಂಜನೆಗಾಗಿ ಡಿಟಿಎಚ್ ಅಗತ್ಯವೂ ಇದೆ. ಹಾಗೆಯೇ, ಮೊಬೈಲ್‌ ಸೇವೆಯೂ ಬೇಕಿದೆ. ಈ ಮೂರೂ ಸೇವೆಗಳನ್ನು ಒಂದೇ ಬಿಲ್ ಪಾವತಿಸುವ ಮೂಲಕ ಪಡೆದುಕೊಳ್ಳಬಹುದು’ ಎಂದು ಭಾರ್ತಿ ಏರ್‌ಟೆಲ್‌ ಕಂಪನಿಯ ಮಾರುಕಟ್ಟೆ ಮತ್ತು ಸಂವಹನ ವಿಭಾಗದ ನಿರ್ದೇಶಕ ಶಾಶ್ವತ್ ಶರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಏರ್‌ಟೆಲ್‌ ಬ್ಲ್ಯಾಕ್’ ಯೋಜನೆಯ ಸೇವೆಗಳನ್ನು ಪಡೆಯುವ ಗ್ರಾಹಕರಿಗೆ, ಡಿಟಿಎಚ್, ಬ್ರಾಡ್‌ಬ್ಯಾಂಡ್ ಹಾಗೂ ಮೊಬೈಲ್‌ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ತಂಡ ಇರುತ್ತದೆ. ಇವರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುತ್ತದೆ ಎಂದೂ ಶರ್ಮ ಹೇಳಿದರು.

ಈಗಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಬ್ರಾಡ್‌ಬ್ಯಾಂಡ್‌, ಡಿಟಿಎಚ್‌ ಹಾಗೂ ಮೊಬೈಲ್‌ ದೂರಸಂಪರ್ಕ ಸೇವೆಗಳನ್ನು ಪಡೆಯುವವರು ಈ ಎಲ್ಲ ಸೇವೆಗಳಿಗೆ ಪ್ರತ್ಯೇಕವಾಗಿ ಬಿಲ್‌ ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT