ಸರ್ಕಾರಕ್ಕೆ ₹ 8,815 ಕೋಟಿ ಮುಂಗಡ ಪಾವತಿ: ಏರ್‌ಟೆಲ್

ನವದೆಹಲಿ: 2015ರಲ್ಲಿ ತರಂಗಾಂತರ ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ₹ 8,815 ಕೋಟಿ ಬಾಕಿ ಮೊತ್ತವನ್ನು ಅವಧಿಗೂ ಮುಂಚಿತವಾಗಿ ಸರ್ಕಾರಕ್ಕೆ ಪಾವತಿ ಮಾಡಲಾಗಿದೆ ಎಂದು ಭಾರ್ತಿ ಏರ್‌ಟೆಲ್ ಕಂಪನಿಯು ಶುಕ್ರವಾರ ತಿಳಿಸಿದೆ.
2026-27 ಮತ್ತು 2027–28ನೇ ಹಣಕಾಸು ವರ್ಷಕ್ಕೆ ಪಾವತಿಸಬೇಕಾಗಿದ್ದ ಕಂತಿನ ಮೊತ್ತವನ್ನು ಮುಂಚಿತವಾಗಿಯೇ ಪಾವತಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕು ತಿಂಗಳ ಅವಧಿಯಲ್ಲಿ ನಿಗದಿತ ಅವಧಿಗೂ ಮುಂಚಿತವಾಗಿಯೇ ₹ 24,334 ಕೋಟಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದೂ ಅದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.