ಅಜಾಕ್ಸ್ ಎಂಜಿನಿಯರಿಂಗ್‌ನಿಂದ ₹ 100 ಕೋಟಿ ಹೂಡಿಕೆ
ಬೆಂಗಳೂರು: ಅಜಾಕ್ಸ್ ಎಂಜಿನಿಯರಿಂಗ್ ಕಂಪನಿಯು ಬೆಂಗಳೂರಿನಲ್ಲಿ ಐದನೆಯ ತಯಾರಿಕಾ ಘಟಕ ನಿರ್ಮಾಣಕ್ಕೆ ₹ 100 ಕೋಟಿ ಹೂಡಿಕೆ ಮಾಡಿರುವುದಾಗಿ ತಿಳಿಸಿದೆ. ತಯಾರಿಕಾ ಘಟಕದ ಒಂದಿಷ್ಟು ಭಾಗವು ಈ ವರ್ಷದ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.
ನಿರ್ಮಾಣ ಉದ್ಯಮದ ಬೇಡಿಕೆಗಳನ್ನು ಪೂರೈಸಲು, ವಹಿವಾಟುಗಳನ್ನು ವಿಸ್ತರಿಸಿಕೊಳ್ಳಲು ಈ ಹೂಡಿಕೆ ಮಾಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕಂಪನಿಯು ಬೆಂಗಳೂರಿನಲ್ಲಿ ಈಗ ನಾಲ್ಕು ತಯಾರಿಕಾ ಘಟಕಗಳನ್ನು ಹೊಂದಿದೆ. ಅಜಾಕ್ಸ್ ಎಂಜಿನಿಯರಿಂಗ್ ಕಂಪನಿಯು ಸ್ವಯಂಚಾಲಿತ ಕಾಂಕ್ರೀಟ್ ಮಿಕ್ಸರ್‌ಗಳನ್ನು ತಯಾರಿಸುತ್ತದೆ.
2022–23ನೆಯ ಹಣಕಾಸು ವರ್ಷದಲ್ಲಿ ಒಟ್ಟು ವಹಿವಾಟು ₹ 1,000 ಕೋಟಿಯಷ್ಟು ಇರಲಿದೆ, 2026ರೊಳಗೆ ತನ್ನ ವಹಿವಾಟು ₹ 3 ಸಾವಿರ ಕೋಟಿಗೆ ಏರಿಕೆ ಆಗಲಿದೆ ಎಂಬ ನಿರೀಕ್ಷೆಯನ್ನು ಕಂಪನಿ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.