ಮಂಗಳವಾರ, ಜೂನ್ 28, 2022
23 °C

ಶೀಘ್ರದಲ್ಲೇ ಆಕಾಶಕ್ಕಿಳಿಯಲಿದೆ ಆಕಾಸ ಏರ್‌ಲೈನ್ಸ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

AKASA AIRLINES TWITTER IMAGE

ಮುಂಬೈ: ಷೇರುಪೇಟೆಯ ಪ್ರಮುಖ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪಾಲುದಾರಿಕೆ ಹೊಂದಿರುವ ಆಕಾಸ ಏರ್‌ಲೈನ್ಸ್, ದೇಶದಲ್ಲಿ ಶೀಘ್ರದಲ್ಲೇ ವಿಮಾನಯಾನ ಸೇವೆ ಒದಗಿಸಲಿದೆ.

ಈ ಬಗ್ಗೆ ಆಕಾಸ ಏರ್‌ಲೈನ್ಸ್ ಸಂಸ್ಥೆ ಸೋಮವಾರ ನೂತನ ವಿಮಾನದ ಚಿತ್ರವನ್ನು ಟ್ವೀಟ್ ಮಾಡಿ, ಶೀಘ್ರದಲ್ಲೇ ನಿಮ್ಮ ಆಕಾಶಕ್ಕೆ ಬರಲಿದ್ದೇವೆ ಎಂದು ಹೇಳಿದೆ.

ದೇಶದಲ್ಲಿ ವಾಣಿಜ್ಯ ಸೇವೆ ನೀಡಲು ಆಕಾಸ ಏರ್‌ಲೈನ್ಸ್, ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿದೆ.

ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡುವುದು ಆಕಾಸ ಸಂಸ್ಥೆಯ ಉದ್ದೇಶವಾಗಿದೆ.

2021ರಲ್ಲಿ ಸಂಸ್ಥೆ 72 ಬೋಯಿಂಗ್ 737 ಮ್ಯಾಕ್ಸ್ ಏರ್‌ಕ್ರಾಫ್ಟ್ ಮತ್ತು ಸಿಎಫ್‌ಎಂ ಲೀಪ್–1ಬಿ ಎಂಜಿನ್‌ಗಳಿಗೆ ಬೇಡಿಕೆ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು