ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಆರ್‌ಎಸ್‌ ಒಪ್ಪಿದ ಬ್ರಿಟಾನಿಯಾ ಕಾರ್ಮಿಕರು

Published 24 ಜೂನ್ 2024, 14:14 IST
Last Updated 24 ಜೂನ್ 2024, 14:14 IST
ಅಕ್ಷರ ಗಾತ್ರ

ಕೋಲ್ಕತ್ತ: ಪ್ರಮುಖ ಎಫ್‌ಎಂಸಿಜಿ ಕಂಪನಿ ಬ್ರಿಟಾನಿಯಾ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಕೋಲ್ಕತ್ತದ ತಾರಾತಲಾ ಕಾರ್ಖಾನೆಯಲ್ಲಿನ ಎಲ್ಲ ಕಾಯಂ ಕಾರ್ಮಿಕರು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್) ಒಪ್ಪಿಕೊಂಡಿದ್ದಾರೆ ಎಂದು ಕಂಪನಿ ಹೇಳಿದೆ.

ಈ ಬದಲಾವಣೆಯು ತನ್ನ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ತಿಳಿಸಿದೆ. 

ಕಾಯಂ ನೌಕರರ ಸ್ವಯಂ ನಿವೃತ್ತಿ ಯೋಜನೆ ಬಗ್ಗೆ ಕಂಪನಿಯು ಈಚೆಗೆ ಷೇರುಪೇಟೆಗೆ ಮಾಹಿತಿ ನೀಡಿತ್ತು. ತಾರಾತಲಾ ಘಟಕವು ಬ್ರಿಟಾನಿಯಾದ ಅತ್ಯಂತ ಹಳೆಯ ಬಿಸ್ಕತ್ತು ತಯಾರಿಕಾ ಘಟಕವಾಗಿದ್ದು, ಏಳು ದಶಕದಿಂದ ಕಾರ್ಯಾಚರಣೆ ನಡೆಸುತ್ತಿದೆ.

ಕಳೆದ 20 ದಿನಗಳಿಂದ ಘಟಕದಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. ಎಲ್ಲ 122 ಕಾಯಂ ನೌಕರರು ವಿಆರ್‌ಎಸ್‌ ಒಪ್ಪಿದ್ದು, 250 ಗುತ್ತಿಗೆ ಕಾರ್ಮಿಕರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಿಐಟಿಯುನ ಹಿರಿಯ ಮುಖಂಡ ಗೌತಮ್‌ ರೇ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT