ಮಂಗಳವಾರ, ಡಿಸೆಂಬರ್ 7, 2021
20 °C

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್: ಆಫರ್ ಸೇಲ್ ದಿನಾಂಕ ಪ್ರಕಟ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Amazon India

ಬೆಂಗಳೂರು: ಅಮೆಜಾನ್ ವಾರ್ಷಿಕ ವಿಶೇಷ ಮಾರಾಟ ದಿನಾಂಕವನ್ನು ಪ್ರಕಟಿಸಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಸೇಲ್ ಅಕ್ಟೋಬರ್ 4ರಿಂದ ಆರಂಭವಾಗುತ್ತದೆ ಎಂದು ಕಂಪನಿ ಹೇಳಿದೆ.

ಹಬ್ಬದ ವಿಶೇಷ ಮಾರಾಟದ ಸಂದರ್ಭದಲ್ಲಿ 1,000ಕ್ಕೂ ಹೆಚ್ಚಿನ ಹೊಸ ಉತ್ಪನ್ನಗಳನ್ನು ಅಮೆಜಾನ್ ಬಿಡುಗಡೆ ಮಾಡಲಿದೆ.

ದೇಶದಲ್ಲಿ ಅಮೆಜಾನ್‌ಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿರುವ ಫ್ಲಿಪ್‌ಕಾರ್ಟ್, ಅಕ್ಟೋಬರ್ 7ರಿಂದ ಬಿಗ್ ಬಿಲಿಯನ್ ಡೇ ವಿಶೇಷ ಮಾರಾಟ ಮೇಳ ಆಯೋಜಿಸಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ವಿವಿಧ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ಬ್ರ್ಯಾಂಡ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ಕೊಡುಗೆಗಳನ್ನು ಕಂಪನಿ ನೀಡಲಿದೆ.

ಜತೆಗೆ ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ಶೇ. 10 ಡಿಸ್ಕೌಂಟ್, ಅಮೆಜಾನ್ ಪೇ ಬಳಕೆದಾರರಿಗೆ ಕೂಡ ಹೆಚ್ಚುವರಿ ಉಳಿತಾಯ ಕೊಡುಗೆ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು