ಬೆಂಗಳೂರು: ಆನ್ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಅಮೆಜಾನ್ 30 ಸಾವಿರ ನೌಕರರನ್ನು ವಜಾಗೊಳಿಸಲು ಮುಂದಾಗಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಂಡಿ ಜೆಸ್ಸಿ ಅವರ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ‘ಬಿಬಿಸಿ’ ವರದಿ ಮಾಡಿದೆ.
.ಗ್ರಾಹಕರಿಗೆ ನೇರವಾಗಿ ಸಾಲ: ಪರವಾನಗಿ ಪಡೆದ ಅಮೆಜಾನ್.
ಈ ಬಗ್ಗೆ ಮಾಹಿತಿ ಬಯಸಿ ‘ಅಮೆಜಾನ್’ ಅನ್ನು ‘ಬಿಬಿಸಿ’ ಸಂಪರ್ಕಿಸಿದರೂ, ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ,

ಇತ್ತೀಚಿನ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ನೌಕರರಿಗೆ ‘ಪಿಂಕ್ ಸ್ಲಿಪ್’ ನೀಡುತ್ತಿರುವುದು ಇದು ಮೊದಲ ಬಾರಿ. 2022ರಲ್ಲಿ ಹಂತಹಂತವಾಗಿ 27 ಸಾವಿರ ಉದ್ಯೋಗಿಗಳನ್ನು ಕಂಪನಿ ಮನೆಗೆ ಕಳುಹಿಸಿತ್ತು.

ನೌಕರರ ವಜಾ ಬಗ್ಗೆ ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದು, ಯಾವ ದೇಶದಲ್ಲಿ, ಯಾವ ವಿಭಾಗದಲ್ಲಿ ನೌಕರರ ಕಡಿತ ಮಾಡಲಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.
.ದೇಶದಾದ್ಯಂತ 1.5 ಲಕ್ಷ ಋತು ಆಧಾರಿತ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್.
ಅಮೆಜಾನ್ನ ಒಟ್ಟು ನೌಕರರ ಪೈಕಿ ಸುಮಾರು ಶೇ 10 ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕವಾಗಿ ಅಮೆಜಾನ್ನಲ್ಲಿ ಸುಮಾರು 15 ಲಕ್ಷ ನೌಕರರಿದ್ದಾರೆ.

ಕಳೆದ ವರ್ಷ ಅಮೆಜಾನ್ ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಕಂಪನಿಯಲ್ಲಿ ಸುಮಾರು 3.5 ಲಕ್ಷ ಕಾರ್ಪೊರೇಟ್ ಉದ್ಯೋಗಿಗಳಿದ್ದಾರೆ. ಇದರಲ್ಲಿ ಕಾರ್ಯನಿರ್ವಾಹಕ, ವ್ಯವಸ್ಥಾಪಕ ಮತ್ತು ಮಾರಾಟ ಹುದ್ದೆಗಳಲ್ಲಿ ಇರುವವರು ಸೇರಿದ್ದಾರೆ.
.ಅಮೆಜಾನ್ ಫುಲ್ಫಿಲ್ಮೆಂಟ್ ಸೆಂಟರ್ಗಳಿಗೆ ಸಾರ್ವಜನಿಕರಿಗೆ ಪ್ರವಾಸ ಅವಕಾಶ.
ದಕ್ಷತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆಗೆ (ಎಐ) ಭಾರಿ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿರುವುದರಿಂದ ಜೆಸ್ಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಎಐ ಬಳಕೆಯ ನೌಕರಿ ಕಡಿತಕ್ಕೆ ಕಾರಣವಾಗಬಹುದು ಎಂದು ಜೆಸ್ಸಿ ಜೂನ್ನಲ್ಲಿಯೇ ಹೇಳಿದ್ದರು.
.ಅಮೆಜಾನ್, ವಾಲ್ಮಾರ್ಟ್ಗೆ ಪೂರ್ಣ ಮಾರುಕಟ್ಟೆ ಪ್ರವೇಶ ಅನುಮತಿ: ಅಮೆರಿಕ ಒತ್ತಡ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.