ಸೋಮವಾರ, ಸೆಪ್ಟೆಂಬರ್ 27, 2021
28 °C

ಅಮೆಜಾನ್: ದೇಶದ 35 ನಗರಗಳಲ್ಲಿ 8 ಸಾವಿರ ಜನರ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬೆಂಗಳೂರು ಸೇರಿದಂತೆ ದೇಶದ 35 ನಗರಗಳಲ್ಲಿ ಒಟ್ಟು ಎಂಟು ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವ ಆಲೋಚನೆಯನ್ನು ಅಮೆಜಾನ್ ಹೊಂದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಹೈದರಾಬಾದ್, ಚೆನ್ನೈ, ಗುರುಗ್ರಾಮ, ಮುಂಬೈ, ಕೋಲ್ಕತ್ತ, ನೊಯಿಡಾ, ಅಮೃತಸರ, ಅಹಮದಾಬಾದ್, ಕೊಯಮತ್ತೂರು, ಜೈಪುರ, ಕಾನ್ಪುರ, ಲುಧಿಯಾನಾ ಸೇರಿದಂತೆ ಒಟ್ಟು 35 ನಗರಗಳಲ್ಲಿ ಈ ನೇಮಕಾತಿಗಳು ನಡೆಯಲಿವೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ದೀಪ್ತಿ ವರ್ಮಾ ತಿಳಿಸಿದ್ದಾರೆ.

ಅಮೆಜಾನ್ ಕಂಪನಿಯು ದೇಶದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈಗಾಗಲೇ 10 ಲಕ್ಷ ಉದ್ಯೋಗ ಸೃಷ್ಟಿಸಿದೆ. 2025ರ ವೇಳೆಗೆ ನೇರವಾಗಿ ಹಾಗೂ ಪರೋಕ್ಷವಾಗಿ ಒಟ್ಟು 20 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿಯೂ ಕಂಪನಿಯು ಒಟ್ಟು ಮೂರು ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಿದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು