ಮಂಗಳವಾರ, ಅಕ್ಟೋಬರ್ 19, 2021
23 °C

ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರತಿ ಶುಕ್ರವಾರ ವಿಶೇಷ ಆಫರ್ ಕೊಡುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Amazon India

ಬೆಂಗಳೂರು: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಯುಕ್ತ ಅಮೆಜಾನ್ ವಿಶೇಷ ಆಫರ್ ಅನ್ನು ಪ್ರೈಮ್ ಸದಸ್ಯರಿಗೆ ನೀಡುತ್ತಿದೆ.

ಅಕ್ಟೋಬರ್‌ 2ರಿಂದ ಆರಂಭವಾಗಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್, ನವೆಂಬರ್ 4ರ ದೀಪಾವಳಿ ಹಬ್ಬದವರೆಗೂ ಮುಂದುವರಿಯುವ ಸಾಧ್ಯತೆಯಿದೆ.

ಹೀಗಾಗಿ, ಅ. 8ರ ಶುಕ್ರವಾರದಿಂದ ಆರಂಭಿಸಿ, ಹಬ್ಬದ ಅವಧಿಯ ಸೇಲ್‌ವರೆಗೆ ಪ್ರೈಮ್ ಸದಸ್ಯರಿಗೆ ವಿಶೇಷ ‘ಪ್ರೈಮ್ ಫ್ರೈಡೇಸ್’ ಕೊಡುಗೆ ನೀಡುತ್ತಿದೆ.

ಈಗಾಗಲೇ ಅಮೆಜಾನ್ ಪ್ರಕಟಿಸಿರುವ ಆಫರ್ ಜತೆಗೆ ಹೆಚ್ಚುವರಿ ಕೊಡುಗೆ ಪ್ರತಿ ಶುಕ್ರವಾರ ಪ್ರೈಮ್ ಸದಸ್ಯರಿಗೆ ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್, ಟಿವಿ, ಫ್ಯಾಶನ್ ಮತ್ತು ವಿವಿಧ ಸರಕುಗಳ ಮೇಲೆ ಅಮೆಜಾನ್ ವಿಶೇಷ ಆಫರ್, ಡಿಸ್ಕೌಂಟ್ ನೀಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು