ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಪ್ರಕರಣಗಳ ಹೆಚ್ಚಳ: ಆರ್‌ಬಿಐನಿಂದ ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

Last Updated 28 ಮಾರ್ಚ್ 2021, 10:40 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಮತ್ತೆ ಹೆಚ್ಚಳ ಆಗುತ್ತಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2021–22ನೇ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಸಭೆಯ ನಿರ್ಧಾರಗಳು ಏಪ್ರಿಲ್‌ 7ರಂದು ಪ‍್ರಕಟವಾಗಲಿವೆ. ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಆರ್‌ಬಿಐ, ಹಿಂದಿನ ಸಭೆಯಲ್ಲಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ತಜ್ಞರ ಪ್ರಕಾರ, ಆರ್‌ಬಿಐ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲಿದೆ. ಹಣದುಬ್ಬರವನ್ನು ನಿಯಂತ್ರಿಸುವ ಗುರಿ ಇಟ್ಟುಕೊಂಡು ಬೆಳವಣಿಗೆಗೆ ವೇಗ ನೀಡಲು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ.

ಕೋವಿಡ್‌–19 ಹರಡುವುದನ್ನು ತಡೆಯಲು ಹಲವು ರಾಜ್ಯಗಳು ಇತ್ತೀಚೆಗೆ ವಿಧಿಸಿರುವ ನಿರ್ಬಂಧಗಳು ಕೈಗಾರಿಕೆಗಳ ಉತ್ಪಾದನೆಯಲ್ಲಿ ಆಗುತ್ತಿರುವ ಚೇತರಿಕೆಗೆ ಅಡ್ಡಿಯಾಗಲಿವೆ ಎಂದು ಡನ್‌ ಆ್ಯಂಡ್‌ ಬ್ರಡ್‌ಸ್ಟ್ರೀಟ್‌ ವರದಿ ಹೇಳಿದೆ.

ಗ್ರಾಹಕ ಹಣದುಬ್ಬರವು ಏರಿಳಿತ ಕಾಣುತ್ತಿದ್ದು, ಇನ್ನೂ ಸ್ಥಿರವಾಗಿಲ್ಲ. ಹೀಗಾಗಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಆಯ್ಕೆಯನ್ನು ಆರ್‌ಬಿಐ ಪರಿಗಣಿಸಬಹುದು ಎಂದು ಆನಾರ್ಕ್‌ ಪ್ರಾಪರ್ಟಿ ಕನ್ಸಲ್ಟಂಟ್ಸ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಸದ್ಯ ರೆಪೊ ದರವು ಶೇಕಡ 4ರಷ್ಟಿದ್ದು, ರಿವರ್ಸ್‌ ರೆಪೊ ದರವು ಶೇ 3.35ರಷ್ಟಿದೆ. ಈ ಹಿಂದೆ 2020ರ ಮೇ 22ರಂದು ಆರ್‌ಬಿಐ ರೆಪೊ ದರವನ್ನು ಶೇ 4ಕ್ಕೆ ಇಳಿಕೆ ಮಾಡಿತ್ತು. ಆ ಬಳಿಕ ಯಾವುದೇ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT