‘ಹಲಾಲ್’ ಪದ ತೆಗೆದ ಎಪಿಇಡಿಎ
ನವದೆಹಲಿ: ಆಡು, ಕುರಿಯಂತಹ ಪ್ರಾಣಿಗಳ ಮಾಂಸಕ್ಕೆ ಸಂಬಂಧಿಸಿದ ನಿಯಮಗಳ ಕೈಪಿಡಿಯಿಂದ ‘ಹಲಾಲ್’ ಪದವನ್ನು ಕೈಬಿಟ್ಟಿರುವ ‘ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ವು (ಎಪಿಇಡಿಎ), ಮಾಂಸ ಆಮದು ಮಾಡಿಕೊಳ್ಳುವ ದೇಶದ ಅಗತ್ಯಗಳಿಗೆ ಅನುಗುಣವಾಗಿ ಪ್ರಾಣಿಗಳ ವಧೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
‘ಹಲಾಲ್ ಪದವು ಗೊಂದಲ ಸೃಷ್ಟಿಸುತ್ತಿದ್ದ ಕಾರಣ ಅದನ್ನು ತೆಗೆಯಲಾಗಿದೆ. ಮಾಂಸ ಅಥವಾ ಇನ್ಯಾವುದೇ ಉತ್ಪನ್ನವು ಖರೀದಿದಾರ ಅಥವಾ ಆಮದು ಮಾಡಿಕೊಳ್ಳುವ ದೇಶದ ಅಗತ್ಯಗಳಿಗೆ ತಕ್ಕಂತೆ ಇರುತ್ತದೆ’ ಎಂದು ಮೂಲಗಳು ಹೇಳಿವೆ. ಎಪಿಇಡಿಎ ನಡೆಯನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.