ವಾಷಿಂಗ್ಟನ್: ಐಫೋನ್ ಮೂಲಕ ಜಾಗತಿಕವಾಗಿ ತನ್ನದೇ ಛಾಪು ಮೂಡಿಸಿರುವ ಪ್ರತಿಷ್ಠಿತ ಆ್ಯಪಲ್ ಸಂಸ್ಥೆಯು ಕೋವಿಡ್ ನಂತರದ ಮೊದಲ ಪ್ರಮುಖ ಉದ್ಯೋಗ ಕಡಿತದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 600ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ.

ಮಾರ್ಚ್ 28ರಂದೇ ವಿವಿಧ ಕಚೇರಿಗಳಲ್ಲಿ 614 ಉದ್ಯೋಗಿಗಳನ್ನು ಆ್ಯಪಲ್ ಸಂಸ್ಥೆ ಗುರುತಿಸಿದ್ದು, ಉದ್ಯೋಗ ಕಡಿತವು ಮೇ 27ಕ್ಕೆ ಜಾರಿಗೆ ಬರಲಿದೆ.

ಸಾಂತಾ ಕ್ಲಾರಾದ 8 ಕಚೇರಿಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಅಲ್ಲಿನ ಕಾರ್ಮಿಕರ ಹೊಂದಾಣಿಕೆ ಮತ್ತು ಮರುತರಬೇತಿ ಅಧಿಸೂಚನೆ ಕಾಯ್ದೆ ಅಡಿ ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಉದ್ಯೋಗ ಕಳೆದುಕೊಳ್ಳುತ್ತಿರುವ ನೌಕರರು, ಯಾವ ವಿಭಾಗ ಅಥವಾ ಪ್ರಾಜೆಕ್ಟ್ಗೆ ಸಂಬಂಧಿಸಿದವರು ಎಂದು ತಿಳಿದುಬಂದಿಲ್ಲ.ಈ ಕುರಿತಂತೆ ಆ್ಯಪಲ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟೆಕ್ ದೈತ್ಯ ಕಂಪನಿಗಳು ಕಳೆದ ಎರಡು ವರ್ಷಗಳಿಂದ ಉದ್ಯೋಗ ಕಡಿತದಲ್ಲಿ ತೊಡಗಿದ್ದರೆ, ಆ್ಯಪಲ್ ಸಂಸ್ಥೆ ಮಾತ್ರ ಅದರಿಂದ ದೂರವೇ ಉಳಿದಿತ್ತು. ಅಲ್ಲದೆ, ಕೋವಿಡ್ ಸಂದರ್ಭದಲ್ಲೂ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು.

ಇತ್ತೀಚಿನ ಉದ್ಯೋಗ ಕಡಿತದಲ್ಲಿ ಕಳೆದ ವಾರ ಅಮೆಜಾನ್ ಸಂಸ್ಥೆಯು ಕ್ಲೌಡ್ ಕಂಪ್ಯುಟಿಂಗ್ ಉದ್ಯಮ ಎಡಬ್ಲ್ಯುಎಸ್ನಿಂದ ನೌಕರರಿಗೆ ಗೇಟ್ಪಾಸ್ ಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.