ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಫೋನ್‌–16: ಮೋರ್‌ ವಿತ್‌ ಇಮ್ಯಾಜಿನ್‌ ಕೊಡುಗೆ

Published : 17 ಸೆಪ್ಟೆಂಬರ್ 2024, 14:48 IST
Last Updated : 17 ಸೆಪ್ಟೆಂಬರ್ 2024, 14:48 IST
ಫಾಲೋ ಮಾಡಿ
Comments

ಬೆಂಗಳೂರು: ಐಫೋನ್‌ ತಯಾರಿಕಾ ಕಂಪನಿ ಆ್ಯಪಲ್‌, ಐಫೋನ್‌ 16 ಅನ್ನು ಬಿಡುಗಡೆ ಮಾಡಿದೆ.

ಆ್ಯಪಲ್‌ನ ಪ್ರಮುಖ ಪಾಲುದಾರರಾದ ಇಮ್ಯಾಜಿನ್‌ (ಆ್ಯಂಪಲ್‌ ಸಮೂಹದ ಭಾಗ) ಆ್ಯಪಲ್‌ 16 ಬಿಡುಗಡೆಗಾಗಿ ಹೊಸ ಕೊಡುಗೆಗಳನ್ನು ಪ್ರಕಟಿಸಿದೆ.

‘ಮೋರ್‌ ವಿತ್‌ ಇಮ್ಯಾಜಿನ್‌’ ಅಭಿಯಾನದಡಿ ಗ್ರಾಹಕರು ಸೆಪ್ಟೆಂಬರ್‌ 19ರ ವರೆಗೆ ₹5 ಸಾವಿರದಲ್ಲಿ ಇದನ್ನು ಪ್ರಿ–ಬುಕ್‌ ಮಾಡಿ, ಏಸಿಕ್ಸ್‌, ಬೋಸ್‌, ಮಿಚಿತ್ರಾ ಮತ್ತು ಸ್ವಿಗ್ಗಿಗಳಂತಹ ಬ್ರ್ಯಾಂಡ್‌ಗಳಿಂದ ವೋಚರ್‌ ಮತ್ತು ಬಹುಮಾನ ಪಡೆಯಬಹುದಾಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್‌, ಗೋವಾ, ಗ್ವಾಲಿಯರ್‌, ಕೇರಳ ಸೇರಿ ದೇಶದ 45 ಇಮ್ಯಾಜಿನ್‌ ಆ್ಯಪಲ್‌ ಮಳಿಗೆಗಳಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಈ ವಿಶೇಷ ಕೊಡುಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

‘ಸೆಪ್ಟೆಂಬರ್ 19ರೊಳಗೆ ಐಫೋನ್‌ ಅನ್ನು ಮುಂಚಿತವಾಗಿ ಬುಕ್‌ ಮಾಡುವ ಮತ್ತು ಖರೀದಿಸುವ ಗ್ರಾಹಕರಿಗಾಗಿ ಲಕ್ಕಿ ಡ್ರಾ ಪ್ರಕಟಿಸಿದ್ದೇವೆ. ಅವರ ಐಫೋನ್‌ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಅವಕಾಶವನ್ನು ಈ ಲಕ್ಕಿ ಡ್ರಾ ನೀಡುತ್ತದೆ’ ಎಂದು ಇಮ್ಯಾಜಿನ್‌ನ ರಿಟೇಲ್‌ ವಿಭಾಗದ ಮುಖ್ಯ ವ್ಯವಹಾರ ಅಧಿಕಾರಿ ಪಾರ್ಥಸಾರಥಿ ಭಟ್ಟಾಚಾರ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT