ಬುಧವಾರ, ಜನವರಿ 22, 2020
21 °C

‘ಏರ್‌ ಇಂಡಿಯಾ ಮುಚ್ಚುವುದಿಲ್ಲ’

ಪಿಟಿಐ/ಎಎಫ್‌ಪಿ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ‘ನಷ್ಟದಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಕಂಪನಿಯನ್ನು ಮುಚ್ಚುವ ಬಗ್ಗೆ ಬರುತ್ತಿರುವ ವದಂತಿಗಳು ಆಧಾರ ರಹಿತ’ ಎಂದು ಕಂಪನಿಯ ಮುಖ್ಯಸ್ಥ ಅಶ್ವನಿ ಲೋಹಾನಿ ಸ್ಪಷ್ಟಪಡಿಸಿದ್ದಾರೆ.

‘ಏರ್‌ ಇಂಡಿಯಾ ತನ್ನ ಹಾರಟ ಮುಂದುವರಿಸಲಿದ್ದು, ಸೇವೆಯ ವಿಸ್ತರಣೆಯೂ ಆಗಲಿದೆ. ಪ್ರಯಾಣಿಕರು, ಕಂಪನಿಗಳು ಅಥವಾ ಏಜೆಂಟ್‌ಗಳು ಆತಂಕ ಪಡುವ ಅಗತ್ಯ ಇಲ್ಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಆ್ಯಪ್‌ ಸಿಇಒ ಟಿಮ್‌ ಕುಕ್ ವೇತನ ಕಡಿತ

ಸ್ಯಾನ್‌ ಫ್ರಾನ್ಸಿಸ್ಕೊ : ಐಫೋನ್‌ ಮಾರಾಟ ಇಳಿಕೆ ಕಂಡಿರುವುದರಿಂದ 2019ರಲ್ಲಿ ಆ್ಯಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಅವರ ವೇತನದಲ್ಲೂ ಕಡಿತ ಮಾಡಲಾಗಿದೆ. 2018ರಲ್ಲಿ ಕುಕ್ ಅವರಿಗೆ ಒಟ್ಟಾರೆ ₹ 113 ಕೋಟಿ ನೀಡಲಾಗಿತ್ತು. 2019ರಲ್ಲಿ ₹ 83.52 ಕೋಟಿ ನೀಡಲಾಗಿದೆ ಎಂದು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ಗೆ ಕಂಪನಿಯು ಮಾಹಿತಿ ನೀಡಿದೆ.

ನಕಾರಾತ್ಮಕ ವಹಿವಾಟು

ಮುಂಬೈ : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 110 ಅಂಶಗಳಷ್ಟು ಇಳಿಕೆ ಕಂಡು 41,464 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಯಿತು.

ಹೂಡಿಕೆದಾರರ ಸಂಪತ್ತು ₹ 1 .01 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಷೇರು‍ಪೇಟೆಯ ಬಂಡವಾಳ ಮೌಲ್ಯ
₹ 156.87 ಲಕ್ಷ ಕೋಟಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 19 ಅಂಶ ಇಳಿಕೆ ಕಂಡು 12,225 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು