ಮಂಗಳವಾರ, ಜುಲೈ 14, 2020
25 °C

ಮಲಬಾರ್‌: ಆಷಾಢ ಬೆಲೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನ ಮತ್ತು ವಜ್ರದ ಆಭರಣ ಮಾರಾಟದ ಅತಿದೊಡ್ಡ ಸಂಸ್ಥೆಯಾಗಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ರಾಜ್ಯದಾದ್ಯಂತ ‘ಆಷಾಢ ಬೆಲೆ ಭರವಸೆ‘ ವಿಶೇಷ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ.

ಆಗಸ್ಟ್‌ 2ರವರೆಗೆ ನಡೆಯಲಿರುವ ಈ ವಿಶೇಷ ಮಾರಾಟ ಬೆಲೆಯ ಸಂದರ್ಭದಲ್ಲಿ ಗ್ರಾಹಕರು ಹಲವಾರು ಕೊಡುಗೆಗಳನ್ನು ಪಡೆಯಬಹುದು.

ಚಿನ್ನದ ಮೇಕಿಂಗ್‌ ಚಾರ್ಜಸ್‌ನಲ್ಲಿ ಶೇ 20 ರಿಂದ ಶೇ 50ರಷ್ಟು ಡಿಸ್ಕೌಂಟ್‌, ವಜ್ರದ ಮೊತ್ತದಲ್ಲಿ ಶೇ 25ರವರೆಗೆ ಡಿಸ್ಕೌಂಟ್‌, 22 ಕ್ಯಾರಟ್‌ನ ಹಳೆಯ ಚಿನ್ನದ ವಿನಿಮಯಕ್ಕೆ ಶೂನ್ಯ ಕಡಿತ, ಕನಿಷ್ಠ ಶೇ 10ರಷ್ಟು ಬೆಲೆ ಪಾವತಿಸಿ ಮುಂಗಡ ಖರೀದಿಸಿ  ಚಿನ್ನದ ಬೆಲೆ ಏರಿಕೆ ವಿರುದ್ಧ ರಕ್ಷಣೆ ಪಡೆಯುವ ಸೌಲಭ್ಯಗಳನ್ನು ಒದಗಿಸಿದೆ.

ಈ ಎಲ್ಲ ಗ್ರಾಹಕ ಸ್ನೇಹಿ ಕೊಡುಗೆಗಳ ಜತೆಗೆ, ಸಂಸ್ಥೆಯು ಗ್ರಾಹಕರ ಬಳಿಯ ಯಾವುದೇ ಬ್ರ್ಯಾಂಡ್‌ನ ಹಳೆಯ ಚಿನ್ನಾಭರಣಗಳನ್ನು ಖರೀದಿಸಲಿದೆ. ಹಣ ಪಾವತಿಯು ಚೆಕ್ಕ ಇಲ್ಲವೆ ಆರ್‌ಟಿಜಿಎಸ್‌ ಮೂಲಕ ನಡೆಯಲಿದೆ.

ಚಿನ್ನಾಭರಣಗಳ ಮರು ಖರೀದಿ, ವಿಮೆ ರಕ್ಷಣೆ ಮತ್ತು ನಿರ್ವಹಣೆ ಸೌಲಭ್ಯವನ್ನೂ ಒದಗಿಸಲಾಗುವುದು. ಎಲ್ಲ ಮಳಿಗೆಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು