ಬುಧವಾರ, ಏಪ್ರಿಲ್ 14, 2021
25 °C

ಎನ್‌ಬಿಎಫ್‌ಸಿ, ಎಚ್‌ಎಫ್‌ಸಿ ನಿರ್ವಹಣಾ ಸಂಪತ್ತು ಹೆಚ್ಚಲಿದೆ: ಇಂಡ್‌ರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: 2021-22ನೇ ಹಣಕಾಸು ವರ್ಷದಲ್ಲಿ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಕಂಪನಿಗಳ (ಎಚ್‌ಎಫ್‌ಸಿ) ನಿರ್ವಹಣಾ ಸಂಪತ್ತು ಹೆಚ್ಚಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಹೇಳಿದೆ.

ಎನ್‌ಬಿಎಫ್‌ಸಿ ಸಂಪತ್ತು ಶೇಕಡ 9.5ರಷ್ಟು ಮತ್ತು ಎಚ್‌ಎಫ್‌ಸಿಗಳ ನಿರ್ವಹಣಾ ಸಂಪತ್ತು ಶೇ 10ರಷ್ಟು ವೃದ್ಧಿಯಾಗಲಿದೆ ಎಂದು ತಿಳಿಸಿದೆ. ಎರಡೂ ವಲಯಗಳ ಕಂಪನಿಗಳ ಮುನ್ನೋಟವು ಸ್ಥಿರವಾಗಿರಲಿದೆ ಎಂದೂ ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ 2020–21ನೇ ಹಣಕಾಸು ವರ್ಷದಲ್ಲಿ ಎನ್‌ಬಿಎಫ್‌ಸಿ ಬೆಳವಣಿಗೆಯು ಶೇ 4ರಿಂದ ಶೇ 5ರ ಆಸುಪಾಸಿನಲ್ಲಿ ಹಾಗೂ ಎಚ್‌ಎಫ್‌ಸಿ ಬೆಳವಣಿಗೆ ಶೇ 6.5ರಷ್ಟು ಇಳಿಕೆ ಆಗುವ ಅಂದಾಜು ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು