ಬುಧವಾರ, ಜುಲೈ 6, 2022
22 °C

ಜನವರಿ 1 ರಿಂದ ಎಟಿಎಂ ಕ್ಯಾಶ್‌ ವಿತ್‌ಡ್ರಾ ಶುಲ್ಕ ಬದಲಾವಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: 2022 ಜನವರಿ 1ರಿಂದ ಎಟಿಎಂ ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ ಪರಿಷ್ಕರಿಸಿದೆ.

ಹಣ ಹಿಂತೆಗೆದುಕೊಳ್ಳುವ ಉಚಿತ ಮಿತಿಗಳನ್ನು ಮೀರಿದ ಮೇಲೆ ಇಲ್ಲಿಯವರೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೆಯೇ ಖಾಸಗಿ ಬ್ಯಾಂಕುಗಳು ಒಂದು ವಹಿವಾಟಿಗೆ ₹20 ವಿಧಿಸುತ್ತಿದ್ದವು. ಇದೀಗ ಈ ಶುಲ್ಕದಲ್ಲಿ 2014ರ ನಂತರ ಮೊದಲ ಬಾರಿಗೆ ಬದಲಾವಣೆ ಆಗಿದೆ.

ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ₹21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಯಾವುದೇ ಗ್ರಾಹಕ ತನ್ನ ಮೂಲ ಬ್ಯಾಂಕ್‌ ಎಟಿಎಂನಿಂದ ಐದು ಬಾರಿ ಹಾಗೂ ಇತರೆ ಬ್ಯಾಂಕ್‌ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ಹಿಂತೆಗೆಯಬಹುದು. (ನಾನ್‌ ಮೆಟ್ರೊ ಸಿಟಿಗಳಲ್ಲಿ ಐದು ಬಾರಿ). ಈ ಕ್ರಮವನ್ನು ಆರ್‌ಬಿಐ ಸಮರ್ಥಿಸಿಕೊಂಡಿರುವುದಾಗಿ ಡಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಕರೆ ವಿವರ 2 ವರ್ಷ ಅಳಿಸದಂತೆ ದೂರಸಂಪರ್ಕ ಸೇವಾ ಕಂಪನಿಗಳಿಗೆ ಕೇಂದ್ರ ತಾಕೀತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು