ನವದೆಹಲಿ (ಪಿಟಿಐ): ವಾಹನ ಮತ್ತು ಅದರ ಬಿಡಿಭಾಗಗಳ ತಯಾರಿಕೆಯನ್ನು ನಿಲ್ಲಿಸುವಂತೆ ಭಾರತೀಯ ವಾಹನ ತಯಾರಿಕರ ಒಕ್ಕೂಟ (ಎಸ್ಐಎಎಂ) ಮತ್ತು ವಾಹನ ಬಿಡಿಭಾಗ ತಯಾರಕರ ಒಕ್ಕೂಟ ಮನವಿ ಮಾಡಿಕೊಂಡಿವೆ.

ಕೊರೊನಾ ಸೋಂಕು ಹರುಡುವುದನ್ನು ತಪ್ಪಿಸುವ ಉದ್ದೇಶದಿಂದ ಸದ್ಯದ ಮಟ್ಟಿಗೆ ತಯಾರಿಕೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ನಿಸಾನ್, ಟಾಟಾ ಮೊಟರ್ಸ್, ಹುಂಡೈ, ಟಿವಿಎಸ್ ಮೋಟರ್, ಟೊಯೋಟ ಕಿರ್ಲೋಸ್ಕರ್ ಮೋಟರ್, ಬಜಾಜ್ ಆಟೊ ಮತ್ತು ಹೀರೊಮೊಟೊಕಾರ್ಪ್ ಕಂಪನಿಗಳು ತಾತ್ಕಾಲಿಕವಾಗಿ ತಯಾರಿಕೆ ನಿಲ್ಲಿಸುವುದಾಗಿ ಘೋಷಿಸಿವೆ.

ಇಂಡಿಯಾ ಸಿಮೆಂಟ್ ತಯಾರಿಕೆ ಸ್ಥಗಿತ: ದೇಶದಾದ್ಯಂತ ಇರುವ ಘಟಕಗಳಲ್ಲಿ ತಯಾರಿಕೆ ನಿಲ್ಲಿಸುವುದಾಗಿ ಇಂಡಿಯಾ ಸಿಮೆಂಟ್ಸ್ ತಿಳಿಸಿದೆ.ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ತಯಾರಿಕೆ ನಿಲ್ಲಿಸಲಾಗುವುದು ಎಂದು ಹೇಳಿದೆ.

₹ 1 ಲಕ್ಷ ಕೋಟಿ ಹೊರಹರಿವು

ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಹೂಡಿಕೆದಾರರು ಷೇರುಗಳು ಮತ್ತು ಸಾಲಪತ್ರಗಳನ್ನು ಮಾರಾಟ ಮಾಡಿ ನಗದು ಸಂಗ್ರಹಿಸಿ ಇಟ್ಟುಕೊಳ್ಳುವುದರತ್ತ ಹೆಚ್ಚು ಗಮನ ನೀಡುತ್ತಿದ್ದಾರೆ.

ಮಾರ್ಚ್ 1 ರಿಂದ 20ರವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಿಂದ ₹ 1 ಲಕ್ಷ ಕೋಟಿ ಹಿಂದಕ್ಕೆ ಪಡೆದಿದ್ದಾರೆ. ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಹೆಚ್ಚು ಸುರಕ್ಷಿತ ಮಾರ್ಗಗಳಾದ ಚಿನ್ನ ಮತ್ತು ಅದಕ್ಕೆ ಸಂಬಂಧಿತ ಹೂಡಿಕೆಗಳಲ್ಲಿ ಬಂಡವಾಳ ತೊಡಗಿಸಲು ವಿದೇಶಿ ಹೂಡಿಕೆದಾರರು ನಿರ್ಧರಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.ಸೋಂಕು ಹರಡುವುದನ್ನು ನಿಯಂತ್ರಿಸಲು ಕೈಗೊಳ್ಳುತ್ತಿರುವ ನಿರ್ಬಂಧಿತ ಕ್ರಮಗಳು ಆರ್ಥಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಹೂಡಿಕೆ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸುತ್ತಿವೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.