ಬುಧವಾರ, ಜೂಲೈ 8, 2020
25 °C

ಬಿಒಬಿ: ಎರಡು ಹೊಸ ಉಳಿತಾಯ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕ್‌ ಆಫ್ ಬರೋಡಾ (ಬಿಒಬಿ), ಮಹಿಳೆಯರು ಮತ್ತು ಹಿರಿಯ ನಾಗರಿಕರಿಗಾಗಿ ಎರಡು ಹೊಸ ಉಳಿತಾಯ ಯೋಜನೆಗಳನ್ನು ಆರಂಭಿಸಿದೆ.

‘ಬರೋಡಾ ಮಹಿಳಾ ಶಕ್ತಿ ಉಳಿತಾಯ ಖಾತೆ’ ಮತ್ತು ‘ಬರೋಡಾ ಹಿರಿಯ ನಾಗರಿಕರ ಉಳಿತಾಯ ಖಾತೆ’ಗಳಿಗೆ, ಬ್ಯಾಂಕ್‌ನ ಸಿಇಒ ಪಿ. ಎಸ್‌. ಜಯಕುಮಾರ್‌ ಅವರು ಚಾಲನೆ ನೀಡಿದ್ದಾರೆ. ಈ ಉಳಿತಾಯ ಖಾತೆ ಆರಂಭಿಸುವವರಿಗೆ ಲಾಕರ್‌ ಬಾಡಿಗೆಯಲ್ಲಿ ರಿಯಾಯ್ತಿ, ಸಾಲ ಮಂಜೂರಾತಿ ಶುಲ್ಕ ವಿನಾಯ್ತಿ ಮತ್ತು ಪ್ರೀಮಿಯಂ ಡೆಬಿಟ್‌ ಕಾರ್ಡ್‌ ನೀಡಲಾಗುವುದು.

ಬರೋಡಾ ಸಮೃದ್ಧಿ ಠೇವಣಿ ಯೋಜನೆಯನ್ನೂ ಬ್ಯಾಂಕ್‌ ಪರಿಚಯಿಸಿದೆ. 444 ದಿನಗಳ ಠೇವಣಿಗೆ ಶೇ 7.15ರಷ್ಟು ಬಡ್ಡಿ ನೀಡಲಾಗುವುದು. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ನೀಡಲಾಗುವುದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು