ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತಾ ಷೇರು ವಿತರಣೆ: ₹ 100 ಕೋಟಿ ಸಂಗ್ರಹಿಸಿದ ಬಾರ್ಬಿಕ್ಯೂ ನೇಷನ್

Last Updated 4 ಸೆಪ್ಟೆಂಬರ್ 2021, 10:43 IST
ಅಕ್ಷರ ಗಾತ್ರ

ನವದೆಹಲಿ: ರೆಸ್ಟೋರೆಂಟ್‌ಗಳ ಅತಿದೊಡ್ಡ ಸಮೂಹವನ್ನು ಹೊಂದಿರುವ ಬಾರ್ಬಿಕ್ಯೂ ನೇಷನ್ ಹಾಸ್ಪಿಟಾಲಿಟಿ ಲಿಮಿಡೆಟ್‌ ಕಂಪನಿಯು ಆದ್ಯತಾ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 100 ಕೋಟಿ ಸಂಗ್ರಹ ಮಾಡಿರುವುದಾಗಿ ಶನಿವಾರ ತಿಳಿಸಿದೆ.

ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸೇರಿದಂತೆ ಒಟ್ಟಾರೆ ಮೂರು ಹೂಡಿಕೆದಾರರಿಗೆ ಷೇರುಗಳನ್ನು ಮಾರಾಟ ಮಾಡಿರುವುದಾಗಿ ಅದು ಹೇಳಿದೆ. ₹ 5ರ ಮುಖಬೆಲೆಯ 11,77,855 ಷೇರುಗಳನ್ನು ಪ್ರತಿ ಷೇರಿಗೆ ₹ 844 ರಂತೆ ಆದ್ಯತಾ ವಿತರಣೆ ಮಾಡಲು ಶನಿವಾರ ನಡೆದ ಕಂಪನಿಯ ಷೇರುದಾರರರ ಸಮಿತಿಯ ಸಭೆಯಲ್ಲಿ ಒಪ್ಪಿಗೆ ದೊರೆಯಿತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ 7,07,713 ಈಕ್ವಿಟಿ ಷೇರುಗಳನ್ನು ₹ 59.99 ಕೋಟಿಗೆ ನೀಡಲಾಗಿದೆ. 238 ಪ್ಲಾನ್‌ ಅಸೋಸಿಯೇಟ್ಸ್‌ ಎಲ್‌ಎಲ್‌ಸಿ ಕಂಪನಿಗೆ 1,76,678 ಷೇರುಗಳನ್ನು ₹14.99 ಕೋಟಿಗೆ ಹಾಗೂ ಮೋತಿಲಾಲ್‌ ಓಸ್ವಾಲ್‌ ಈಕ್ವಿಟಿ ಆಪರ್ಚುನಿಟೀಸ್‌ ಫಂಡ್‌ ಸಿರೀಸ್‌–2ಗೆ 2,94,464 ಷೇರುಗಳನ್ನು ₹ 24.99 ಕೋಟಿಗೆ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಈ ವಿತರಣೆಯ ಮೂಲಕ ಕಂಪನಿಯ ಪಾವತಿಸಿದ ಷೇರು ಬಂಡವಾಳ ₹ 18.78 ಕೋಟಿಗಳಿಂದ ₹ 19.37 ಕೋಟಿಗಳಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT